fbpx
ಸಮಾಚಾರ

ರಶ್ಮಿಕಾ ವಿರುದ್ಧ ಕೆಂಡ ಕಾರುತ್ತಿರುವ ‘ಶ್ರೀಮನ್ನಾರಾಯಣ’ನ ಭಕ್ತರು.

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕ್​ ಅಪ್​ ಆಗಿದ್ದೇ ಆಗಿದ್ದು ಇಬ್ಬರ ಫ್ಯಾನ್ಸ್, ಟಾರ್ಗೆಟ್​ ಮಾಡೋಕ್ಕೆ ಶುರು ಮಾಡಿ ಟ್ರೋಲ್ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಇದೀಗ ಮತ್ತೆ ರಕ್ಷಿತ್ ಫ್ಯಾನ್ಸ್​​ ರಶ್ಮಿಕಾ ಮೇಲೆ ಗರಂ ಆಗಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ರಶ್ಮಿಕಾ ಇನ್ನು ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಯಾಕೆ ಪ್ರತ್ರಿಕ್ರಿಯೆ ನೀಡಿಲ್ಲ ಎಂಬುದು ಫ್ಯಾನ್ಸ್‌ಗಳ ಆಕ್ರೋಶ.

ಇದಕ್ಕೆ ಕಾರಣವಾಗಿದ್ದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್. ತೆಲುಗು ಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳನ್ನು ಹಂಚಿಕೊಳ್ಳುತ್ತೀರುವ ರಶ್ಮಿಕಾಗೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಯಾಕೆ ಕಾಣಿಸುತ್ತಿಲ್ಲಾ? ಎಂದು ನಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ರಶ್ಮಿಕಾ ತೆಲುಗು ಟೀಸರ್ ಅನ್ನು ಶೇರ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸುತ್ತಾರೆ. ಆದ್ರೆ ಇತ್ತೀಚಿಗೆ ರಿಲೀಸ್ ಆದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಬಗ್ಗೆ ಏನು ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ವಿರುದ್ಧ ರಕ್ಷಿತ್ ಫ್ಯಾನ್ಸ್ ಗರಂ ಆಗಿದ್ದಾರೆ. ‘ನೀವು ಕೈ ಕೊಟ್ರು ನಾವು ಬಿಡಲ್ಲ’ ಎಂದು ಹೇಳುತ್ತಾ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪೋಸ್ಟರ್ಸ್ ಅನ್ನು ಕಾಮೆಂಟ್ ಮಾಡುತ್ತಿದ್ದಾರೆ.

ರಕ್ಷಿತ್​ ಹುಟ್ಟು ಹಬ್ಬಕ್ಕೆ ರಶ್ಮಿಕಾ ವಿಶ್​ ಮಾಡದೆ ಇರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ. ರಶ್ಮಿಕಾಗೆ ಹಿಟ್​ ಕೊಟ್ಟ ಚಿತ್ರ ಕಿರಿಕ್​ ಪಾರ್ಟಿ. ಈ ಚಿತ್ರಕ್ಕೆ ಅವರನ್ನು ಕರೆತಂದಿದ್ದು ರಕ್ಷಿತ್​. ಈಗ ಅವರ ಕೆರಿಯರ್​ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವ ರಕ್ಷಿತ್​ ಅವರನ್ನೇ ಮರೆತಿದ್ದು ಎಷ್ಟು ಸರಿ ಎಂಬುದು ಅಭಿಮಾನಿಗಳ ಪ್ರಶ್ನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top