fbpx
ಸಮಾಚಾರ

ಮನೆ ಖಾಲಿ ಮಾಡಿಕೊಟ್ಟರೂ ಯಶ್ ಮೇಲೆ ಮತ್ತೆ ಆಪಾದನೆ.

ವರ್ಷಾಂತರಗಳಿಂದ ವಾಸಿಸಿದ್ದ ಮನೆಯ ಬಾಡಿಗೆ ಕಟ್ಟದೆ ಸತಾಯಿಸಿದ, ಕೇಳಲು ಹೋದ ಮಾಲೀಕರಿಗೇ ರೋಪು ಹಾಕಿದ ಆರೋಪವೊಂದು ವರ್ಷಗಳ ಹಿಂದೆ ಯಶ್ ವಿರುದ್ಧ ಕೇಳಿ ಬಂದಿತ್ತಲ್ಲಾ? ಇದೀಗ ಈ ಕೇಸ್ ಅಂತ್ಯಗೊಂಡಿದೆ. ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ಕೋರ್ಟ್ ಆದೇಶದ ಪ್ರಕಾರ ಬಾಡಿಗೆ ಹಣವನ್ನು ಡಿಡಿ ಮಾಡಿ ಮಾಲೀಕರ ಪರ ವಕೀಲರಿಗೆ ಹಸ್ತಾಂತರ ಮಾಡಿ, ನೆನ್ನೆ ಮನೆ ಖಾಲಿ ಮಾಡಿದ್ದಾರೆ. ಕೀ ಪಡೆದ ಬಳಿಕ ಮನೆ ಪರಿಶೀಲನೆ ನಡೆಸಿರುವ ಮನೆ ಮಾಲೀಕರು ಯಶ್ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ.ಮನೆಯನ್ನು ಖಾಲಿ ಮಾಡಿದ್ದು ಹತಾಶೆಯಲ್ಲಿ ಯಶ್ ಮನೆಯಲ್ಲಿದ್ದ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂದು ಮನೆ ಮಾಲೀಕರು ಹೊಸ ಆರೋಪ ಮಾಡಿದ್ದಾರೆ.

ಯಶ್ ಕುಟುಂಬ ಮನೆ ಖಾಲಿ ಮಾಡಿದ ನಂತರ ಮನೆ ಬಾಗಿಲು ತೆರೆದು ನೋಡಿದಾಗ ಮಾಲೀಕರಿಗೆ ಶಾಕ್ ಎದುರಾಗಿತ್ತಂತೆ. ಮನೆಯಲ್ಲಿನ ಕೆಲ ವಸ್ತುಗಳನ್ನು ಹೊಡೆದಿರುವುದು ಕಣ್ಣಿಗೆ ಕಾಣಿಸಿದೆ. ವಾರ್ಡ್ ರೋಬ್ ಬಾಗಿಲು, ಹಾಲ್ ನ ನೆಲ ಅಡುಗೆ ಕೊನೆಯ ಕೆಲ ವಸ್ತುಗಳು, ಫಾರಿನ್ ಕಮೋಡ್ ಕೂಡ ಹೊಡೆದು ಹಾಕಿದ್ದಾರೆ ಎಂದು ಮನೆ ಮಾಲೀಕರು ಯಶ್ ವಿರುದ್ಧ ಆರೋಪಿಸಿದ್ದಾರೆ.

ಯಶ್ ಮನೆಯವರು ಮನೆಯನ್ನು ತುಂಬಾ ಹಾಳು ಮಾಡಿದ್ದಾರೆ. ಉಪಯೋಗಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಧಕ್ಕೆ ಮಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನ ನಾಶ ಮಾಡಿ, ವಾಸಕ್ಕೆ ಯೋಗ್ಯವಲ್ಲ ಎಂಬ ಸ್ಥಿತಿ ನಿರ್ಮಿಸಿರುವ ಯಶ್ ಕುಟುಂಬದ ವಿರುದ್ಧ ಕೇಸ್ ದಾಖಲಿಸಲು ಮನೆ ಮಾಲೀಕ ಮುಂದಾಗಿದ್ದಾರೆ ಎಂದು ಮನೆ ಮಾಲೀಕರ ಪರ ವಕೀಲರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top