fbpx
ಸಮಾಚಾರ

“ಕೆಲಸ ಮಾಡದಿದ್ರೆ ರಾಜೀನಾಮೆ ಕೊಡಲಿ” ತಮ್ಮಣ್ಣಗೆ ಸುಮಲತಾ ತಿರುಗೇಟು.

ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆ ಸಚಿವ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ ವಿಚಾರವಾಗಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯಿಸಿ, “ಸಚಿವರಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾದು. ಅವರಿಗೆ ಮತಹಾಕಿ ಗೆಲ್ಲಿಸಿರೋದು ಮಂಡ್ಯ ಜನರು. ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಜಾರಾಗಿದ್ರೆ ರಾಜೀನಾಮೆ ಕೊಡಿ ಎಂದರು. ಬಳಿಕ ಜೆಡಿಎಸ್ ಸೋಲಿಗೆ ಡಿ.ಸಿ ತಮ್ಮಣ್ಣ ಅವರ ಹೇಳಿಯೇ ಕಾರಣ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಏನಿದು ಘಟನೆ:
ಸಮಸ್ಯೆ ಹೇಳಿಕೊಳ್ಳಲು ಬಂದ ಮಂಡ್ಯ ಜನರ ವಿರುದ್ಧ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಆಕ್ರೋಶ ಹೊರಹಾಕಿದ್ದರು. ಮದ್ದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ವೇಳೆ ಸಚಿವರ ಬಳಿ ಜನರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮನವಿ ಮಾಡಿದ್ದಾರೆ. ಈ ವೇಳೆಯೇ ಎಲ್ಲರ ಎದುರು ಗರಂ ಆದ ತಮ್ಮಣ್ಣ, “ಚುನಾವಣೆ ಮುಗಿದ ಬಳಿಕ ನಮ್ಮ ನೆನಪಾಗಿದೆ. ಈಗ ನಮ್ಮ ಬಳಿ ಬರುತ್ತೀರಾ. ಈಗ ಯಜಮಾನಿಕೆ ಮಾಡಲು ಬರುತ್ತೀರಲ್ಲಾ? ನಾಚಿಕೆಯಾಗಲ್ವಾ ನಿಮಗೆ,” ಎಂದು ಜನರಿಗೆ ತೀವ್ರ ವಾಗ್ದಾಳಿ ನಡೆಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top