fbpx
ಸಮಾಚಾರ

ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಪುಸ್ತಕ ವಿತರಿಸಿ, ಸ್ವತಃ ತಾವೇ ಶೂ ತೊಡಿಸಿದ ನಟ ಸುದೀಪ್.

ಸುದೀಪ್ ಒಬ್ಬ ಒಳ್ಳೆಯ ನಟ ಮಾತ್ರವಲ್ಲದೆ ಅಷ್ಟೇ ಒಳ್ಳೆಯ ಮನಸಿನ ವ್ಯಕ್ತಿಕೂಡ ಹೌದು. ಸುತ್ತಮುತ್ತಲಿನ ಜನರ ಬಗ್ಗೆ ಅಪಾರ ಕಾಳಜಿ ಕಳಕಳಿ ಹೊಂದಿರುವ ಸುದೀಪ್ ಚಿತ್ರರಂಗದ ಒಳಗೂ ಹೊರಗೂ ತಮ್ಮ ಕೈನಲ್ಲಾದಷ್ಟು ಸೇವೆಯನ್ನು ಮಾಡಿದ್ದಾರೆ. ಸುದೀಪ್ ಏನೇ ಸಹಾಯ ಮಾಡಿದರೂ ಅಷ್ಟಾಗಿ ಅವು ಹೊರಗೆ ಬರುವುದಿಲ್ಲ, ಒಂದು ರೀತಿ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಯಬಾರದು ಎಂತರಲ್ಲಾ ಹಾಗೆ. ಆದರೆ ಈಗ ಕಿಚ್ಚನ ಸತ್ಕಾರ್ಯವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.. ಏನದು ಅಂತೀರಾ ಮುಂದೆ ಓದಿ

 

 

ಕಿಚ್ಚ ಸುದೀಪ್ ಈ ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮ ಚಾರಿಟಬಲ್ ಟ್ರಸ್ಟ್​ನಿಂದ ಉಚಿತ ಶೂ ಹಾಗೂ ಪುಸ್ತಕ ವಿತರಣೆ ಮಾಡುವ ಮೂಲಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದಾರೆ. ಕೆಂಗೇರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಿಚ್ಚಸುದೀಪ್ ಚಾರಿಟೇಬಲ್ ಟ್ರಸ್ಟ್ ಶೂ ಹಾಗು ಪುಸ್ತಕ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶೂ ವಿತರಣೆ ಕಾರ್ಯಕ್ರಮಕ್ಕೆ ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಆಹ್ವಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರು, ಪ್ರತಿ ವಿದ್ಯಾರ್ಥಿಗೂ ತಾವೇ ಶೂ ವಿತರಿಸಿದರು. ಅಲ್ಲದೆ ವಿದ್ಯಾರ್ಥಿಯೊಬ್ಬನಿಗೆ ಸ್ವತಃ ತಾವೇ ಶೂ ತೊಡಿಸಿ ಗಮನ ಸೆಳೆದರು. ಸುದೀಪ್ ಅವರ ನೋಡಿದ ಒಂದು ಖುಷಿಯಾದರೆ, ಸುದೀಪ್ ಅವರಿಂದ ಶೂ ಪಡೆದ ಮತ್ತೊಂದು ಖುಷಿ ಆ ಶಾಲಾ ಮಕ್ಕಳಲ್ಲಿ ಕಾಣಿಸುತ್ತಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top