fbpx
ಸಮಾಚಾರ

ಮಾಲ್ಡೀವ್ಸ್ ವಿದೇಶಿ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಪ್ರಧಾನಿ ಮೋದಿ.

ಮಾಲ್ಡೀವ್ಸ್ ಸರ್ಕಾರದ ವತಿಯಿಂದ ವಿದೇಶೀ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ನೀಡಿರುವುದಾಗಿ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಹಿಲ್ ಶನಿವಾರ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಇಂದು ಮತ್ತು ನಾಳೆ ಮಾಲ್ಡೀವ್ಸ್ ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷರು ಈ ಘೋಷಣೆ ಮಾಡಿದ್ದಾರೆ.

ವಿದೇಶಿ ಗಣ್ಯರಿಗೆ ನೀಡುವ ಅಲ್ಲಿನ ಅತ್ಯುನ್ನತ ಗೌರವ ‘ಡಿಸ್ಟಿಂಗ್ಯುಷ್ಡ್ ರೂಲ್ ಆಫ್ ನಿಶಾನ್ ಇಜ್ಜುದ್ದೀನ್’ ವನ್ನು ಪ್ರಧಾನಿ ಮೋದಿ ಸ್ವೀಕರಿಸಲಿದ್ದಾರೆ” ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಟ್ವೀಟ್ ಮಾಡಿದ್ದಾರೆ.

 

 

ಬಿಜೆಪಿ ನೇತೃತ್ವದ ಎನ್‌ ಡಿ ಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಮೋದಿ ಅವರ ಮೊದಲ ದ್ವಿಪಕ್ಷೀಯ ವಿದೇಶ ಭೇಟಿ ಇದಾಗಿದೆ. ಮಾಲ್ಡೀವ್ಸ್ ನ ಭದ್ರತಾ ಪಡೆಯ ಉನ್ನತೀಕರಣಕ್ಕೆ ಜಂಟಿ ರಕ್ಷಣಾ ಸಹಭಾಗಿತ್ವದ ಒಪ್ಪಂದದನ್ವಯ ಸ್ಥಾಪಿಸಲಾಗಿರುವ ಕರಾವಳಿ ನಿಗಾ ರೆಡಾರ್ ವ್ಯವಸ್ಥೆ ಮತ್ತು ಸಮಗ್ರ ತರಬೇತಿ ಕೇಂದ್ರವನ್ನು ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಸೋಹಿಲ್ ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top