fbpx
ಸಮಾಚಾರ

ಕೃಷ್ಣ ದೇವಾಲಯದಲ್ಲಿ 112ಕೆಜಿ ತಾವರೆ ತುಲಾಭಾರ ಸೇವೆ ಮಾಡಿದ ಪ್ರಧಾನಿ ಮೋದಿ

ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ದ್ವೀಪ ರಾಷ್ಟ್ರ ಮಾಲ್ಡೀವ್ಸ್​​ ಹಾಗೂ ಶ್ರೀಲಂಕಾಗೆ ಮೋದಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡನೇ ಬಾರಿಗೆ ಪ್ರಧಾನಿ ಮೋದಿ ಗುರುವಾಯೂರಿಗೆ ಆಗಮಿಸಿದ್ದಾರೆ.

 

 

 

ಸುಪ್ರಸಿದ್ಧ ಗುರುವಾಯೂರಪ್ಪನ್ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 112 ಕಿಲೋ ತಾವರೆ ಹೂವುಗಳ ತುಲಾಭಾರ ಸೇವೆ ನಡೆಸಿದರು. ಪ್ರಧಾನಿಯಾಗಿ 2ನೇ ಬಾರಿ ಆಯ್ಕೆಯಾದ ಬಳಿಕ ಮೊದಲ ವಿದೇಶ ಪ್ರವಾಸವಾಗಿ ಮಾಲ್ದೀವ್ಸ್‌ಗೆ ಭೇಟಿ ನೀಡುವ ಮುನ್ನ ಮೋದಿ ಅವರು ಗುರುವಾಯೂರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ತುಲಾಭಾರ ಸೇವೆಯ ಬಳಿಕ ಪ್ರಧಾನಿ ಮೋದಿ ವಿಶೇಷ ಪೂಜೆಯನ್ನೂ ನೆರವೇರಿಸಿದರು.

ಮೋದಿ ಅವರ ತುಲಾಭಾರ ಸೇವೆಗಾಗಿ 112 ಕೆ.ಜಿ. ತಾವರೆ ಹೂವುಗಳನ್ನು ತಮಿಳುನಾಡಿನ ನಾಗರಕೊಯಿಲ್‌ನಿಂದ ತರಿಸಲಾಗಿದೆ. ಈ ವೇಳೆ ಗುರುಯೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನದಾಸ್‌ ಇದ್ದರು. ಅಂದಹಾಗೆ ಮೋದಿ ಅವರು 2008ರಲ್ಲೂ ಈ ದೇವಸ್ಥಾನದಲ್ಲಿ ತಾವರೆ ಹೂವುಗಳಲ್ಲಿ ತುಲಾಭಾರ ಸೇವೆ ಮಾಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top