fbpx
ಸಮಾಚಾರ

ಭಾರತ ವಿರುದ್ಧ ವಿಶೇಷ ಸಂಭ್ರಮಾಚರಣೆ- ಪಾಕ್ ಮನವಿ ತಿರಸ್ಕರಿಸಿದ ಮಂಡಳಿ.

ಪುಲ್ವಾಮಾ ಯೋಧರ ಬಲಿದಾನಕ್ಕಾಗಿ ಭಾರತ ಸೇನೆಯ ಕ್ಯಾಪ್ ಧರಿಸಿ ಕಣಕ್ಕಿಳಿದಿತ್ತು. ಇದು ಪಾಕಿಸ್ತಾನದ ಕಣ್ಣು ಕೆಂಪಾಗಿಸಿತ್ತು. ಇದಕ್ಕೆ ತಿರುಗೇಟು ನೀಡಲು ರೆಡಿಯಾಗಿದ್ದ ಪಾಕಿಸ್ತಾನ ಕ್ರಿಕೆಟಿಗರು, ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸಿ ವಿಶೇಷ ರೀತಿ ಸಂಭ್ರಮಿಸಲು ರೆಡಿಯಾಗಿತ್ತು. ಪ್ರತಿ ವಿಕೆಟ್ ಕಬಳಿಸಿದಾಗ ಪಾಕಿಸ್ತಾನ ಸೇನೆಗೆ ಸೆಲ್ಯೂಟ್ ಹಾಗೂ ವಿಶೇಷ ಸಂಭ್ರಮಾಚರಣೆಗೆ ಪಾಕಿಸ್ತಾನ ಆಟಗಾರರು ಸಜ್ಜಾಗಿದ್ದರು. ಈ ಯೋಜನೆಯನ್ನು ಕೈಬಿಡಲು ಪಿಸಿಬಿ ಹೇಳಿದೆ.

ಭಾರತದ ಎದುರಿನ ಪಂದ್ಯದಲ್ಲಿ ವಿಕೆಟ್​ ಕಬಳಿಸಿದರೆ ಅದನ್ನು ವಿಭಿನ್ನವಾಗಿ ಆಚರಿಸುವ ಪ್ರಸ್ತಾವನೆಯನ್ನು ಪಾಕ್​ ಕ್ರಿಕೆಟ್​ ತಂಡದ ನಾಯಕ ​ಸರ್ಫ್​​ರಾಜ್​ ಖಾನ್​ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕಳುಹಿಸಿದ್ದಾರೆ. ಆದರೆ, ಈ ಪ್ರಸ್ತಾವನೆಯನ್ನು ಪಿಸಿಬಿ ನಿರಾಕರಿಸಿದೆ

 

 

ಮಿಲಿಟರಿ ಕ್ಯಾಪ್ ತೊಟ್ಟಿದ್ದ ಟೀಮ್ ಇಂಡಿಯಾ:
ಫೆ.14 ರಂದು ಪಾಕ್ ಬೆಂಬಲಿತ ಉಗ್ರಗಾಮಿ ತಂಡವಾದ ಜೈಶ್​-ಎ-ಮೊಹಮ್ಮದ್ ಭಾರತದ ಸಿಆರ್​ಪಿಎಫ್​ ಸೇನಾ ತುಕಡಿಯ ಮೇಲೆ ಆತ್ಮಹತ್ಯಾ ದಾಳಿ ನಡೆಸಿತ್ತು. ಈ ದಾಳಿಯ ಸಂದರ್ಭದಲ್ಲಿ ಭಾರತದ 40ಕ್ಕೂ ಹೆಚ್ಚು ಜನ ಯೋಧರು ಪ್ರಾಣ ಕಳೆದುಕೊಂಡಿದ್ದರು. ಪಾಕಿಸ್ತಾನ ಹಾಗೂ ಉಗ್ರಗಾಮಿಗಳ ಇಂತಹ ಕ್ರಮವನ್ನು ಖಂಡಿಸಿದ್ದ ಭಾರತ ತಂಡ ಮಾರ್ಚ್​ನಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಸೇನಾ ಕ್ಯಾಪ್ ಧರಿಸಿ ಪಂದ್ಯ ಆಡಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಸಂದೇಶ ರವಾನಿಸಿತ್ತು.

ಇದಕ್ಕೆ ಪಾಕಿಸ್ತಾನ ಐಸಿಸಿಗೆ ದೂರು ನೀಡಿತ್ತು. ಈ ಸೇಡು ತೀರಿಸಿಕೊಳ್ಳಲು ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡ ಎಲ್ಲಾ ರೀತಿ ಸಜ್ಜಾಗಿತ್ತು. ಟೀಂ ಇಂಡಿಯಾ ಕ್ರಿಕೆಟಿಗರ ವಿಕೆಟ್ ಕಬಳಿಸಿ ಸಲ್ಯೂಟ್ ಮೂಲಕ ಪಾಕಿಸ್ತಾನ ಸೇನೆಗೆ ಗೌರವ ಹಾಗೂ ಭಾರತಕ್ಕೆ ತಿರುಗೇಟು ನೀಡಲು ಪಾಕಿಸ್ತಾನ ಮುಂದಾಗಿತ್ತು. ಆದರೆ ಪಿಸಿಬಿ ಅವಕಾಶ ನೀಡಿಲ್ಲ. ಇಷ್ಟಾದರೂ ಪಾಕ್ ಆಟಗಾರರು ಭಾರತ ವಿರುದ್ಧ ಪಂದ್ಯದಲ್ಲಿ ಏನಾದರೂ ಕುಚೇಷ್ಟೆ ಮಾಡಿಯೇ ಮಾಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top