fbpx
ಸಮಾಚಾರ

ಸೇನಾ ಗ್ಲೌಸ್ ವಿವಾದ: ಧೋನಿ ಬೆಂಬಲಕ್ಕೆ ನಿಂತ ಕರ್ನಾಟಕದ ಸಂಸದ ಜಿಸಿಸಿ.

2019ರ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಯೋಧರ ಬಲಿದಾನದ ಲಾಂಛನವನ್ನು ಹೊಂದಿರುವ ಗ್ಲೌಸ್ ಧರಿಸುವ ಮೂಲಕ ವಿವಾದಕ್ಕಿಡಾಗಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕರ್ನಾಟಕದ ಸಂಸದ ಜಿಸಿ ಚಂದ್ರಶೇಖರ್ ಬೆಂಬಲಿಸಿದ್ದಾರೆ.

“ದೋನಿಗೆ ನಮ್ಮ ಎಲ್ಲ ಭಾರತೀಯರ ಬೆಂಬಲ ಇದೆ #keepthegloves. ಇದು ಈಗ ಕೇವಲ ಒಂದು ಕ್ರೀಡೆಯ ವಿಷಯವಾಗಿ ಉಳಿದಿಲ್ಲ, ಇಡೀ ನಮ್ಮ ದೇಶದ ಹೆಮ್ಮೆಯ ವಿಚಯವಾಗಿದೆ. ಧೋನಿ ಅವರೇ ‘ಬಲಿದಾನ್ ಲೋಗೋ’ ಇರುವ ಗ್ಲೋವ್ ಧರಿಸಿಯೇ ಆಡಿ” ಎಂದು ಟ್ವೀಟ್ ಮಾಡುವ ಮೂಲಕ ಜಿಸಿಸಿ ಧೋನಿಯವರಿಗೆ ಬೆಂಬಲ ನೀಡಿದ್ದಾರೆ.

ಏನಿದು ವಿವಾದ?
ಡಾಅಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಧೋನಿ ಬಲಿದಾನ್ ಲೋಗೋ ಇರುವ ಗ್ಲೋವ್ ತೊಟ್ಟು ವಿಕೆಟ್ ಕೀಪಿಂಗ್ ಮಾಡಿದ್ದರು. ಇದನ್ನು ಗಮನಿಸಿದ ಐಸಿಸಿ ನಿನ್ನೆಯಷ್ಟೆ ತಮ್ಮ ಗ್ಲೌಸ್‌ನಿಂದ ಸೇನಾ ಲಾಂಛನವನ್ನು ತೆಗೆಯುವಂತೆ ಧೋನಿಗೆ ಸೂಚಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮನವಿ ಮಾಡಿದೆ. ಆದರೆ ಧೋನಿ ಬೆನ್ನಿಗೆ ನಿಂತ ಬಿಸಿಸಿಐ, ಧೋನಿ ಧರಿಸಿರುವ ಸೇನಾ ಲಾಂಛನವು ಧಾರ್ಮಿಕ ಅಥವಾ ವಾಣಿಜ್ಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಹೇಳಿ ಗ್ಲೋವ್ಸ್ ಧರಿಸಲು ವಿಶೇಷ ಮನವಿ ಮಾಡಿಕೊಂಡಿತ್ತು. ಆದರೆ ಮನವಿಯನ್ನು ತಿರಸ್ಕರಿಸಿರುವ ಐಸಿಸಿ “ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಜಾಹೀರಾತು ಲೋಗೊ ಹೊಂದಿರಬಹುದು. ಧೋನಿ ಈಗಾಗಲೇ ಎಸ್‌ಜಿ ಲೋಗೊವನ್ನು ಹೊಂದಿದ್ದಾರೆ. ಹೀಗಾಗಿ ಇದು ನಿಯಮದ ಉಲ್ಲಂಘನೆಯಾಗುತ್ತದೆ” ಎಂದು ಐಸಿಸಿ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top