fbpx
ಸಮಾಚಾರ

ಮೈದಾನದಲ್ಲೇ ನಮಾಜ್ ಮಾಡುವ ಪಾಕಿಸ್ತಾನಿಯರಿಗಿಲ್ಲದ ನಿಯಮ ಧೋನಿಗೇಕೆ?

2019ರ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಯೋಧರ ಬಲಿದಾನದ ಲಾಂಛನವನ್ನು ಹೊಂದಿರುವ ಗ್ಲೌಸ್ ಧರಿಸುವ ಮೂಲಕ ವಿವಾದಕ್ಕಿಡಾಗಿರುವ ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ಭಾರಿ ಚರ್ಚೆಯಾಗುತ್ತಿದ್ದಾರೆ. ಒಂದೆಡೆ ಐಸಿಸಿ ಸೇನಾ ಚಿಹ್ನೆ ತೆಗೆಯಲು ಮನವಿ ಮಾಡಿದ್ದರೆ, ಮತ್ತೊಂದೆಡೆ ಧೋನಿ ‘ಬಲಿದಾನ್’ ಚಿಹ್ನೆ ತೆಗೆಯಬಾರದೆಂದು ಬಹುದೊಡ್ಡ ಅಭಿಯಾನವೇ ಆರಂಭವಾಗಿದೆ.

ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳಿಗೆ ಮೈದಾನದಲ್ಲಿಯೇ ನಮಾಜ್ ಮಾಡಲು ಅವಕಾಶ ಕೊಟ್ಟಿರುವ ಐಸಿಸಿ ಧೋನಿ ಅವರು ಅವರಿಷ್ಟದ ಗ್ಲೌಸ್ ಬಳಸಲು ಅನುಮತಿ ಏಕೆ ನಿರಾಕರಿಸುತ್ತಿದೆ ಎಂದು ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ. ಮೈದಾನದಲ್ಲಿ ನಮಾಜ್ ಮಾಡಲೂ ಅವಕಾಶವಿರುವಾಗ ದೇಶಭಕ್ತಿಯ ಸಂಕೇತವಾಗಿ ಸೇನೆಯ ಚಿಹ್ನೆ ಬಳಸಿದರೆ ತಪ್ಪೇನು?’ ಎಂದು ಸುರೇಶ್ ರೈನಾ ಪ್ರಶ್ನಿಸಿದ್ದಾರೆ.

2011ರ ವಿಶ್ವಕಪ್ ಪಂದ್ಯದ ವೇಳೆ ಪಾಕ್ ಆಟಗಾರರಿಗೆ ಮೈದಾನಲ್ಲೇ ನಮಾಜ್ ಮಾಡಿದ್ದು ಸರಿಯಾದರೆ ಧೋನಿ ಸೇನಾ ಚಿಹ್ನೆ ಯಾಕೆ ಧರಿಸಬಾರದು ಎಂದೂ ಪ್ರಶ್ನಿಸುತ್ತಿದ್ದಾರೆ. ಸದ್ಯ #DhoniKeepTheGlove ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಭಾರೀ ಟ್ರೆಂಡ್ ಆಗುತ್ತಿದ್ದು, ಯಾವುದೇ ಕಾರಣಕ್ಕೂ ಗ್ಲೌಸ್ ಮೇಲಿನ ಸೇನಾ ವಚಿಹ್ನೆ ತೆಗೆಯಬಾರದೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಏನಿದು ವಿವಾದ?
ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಧೋನಿ ಬಲಿದಾನ್ ಲೋಗೋ ಇರುವ ಗ್ಲೋವ್ ತೊಟ್ಟು ವಿಕೆಟ್ ಕೀಪಿಂಗ್ ಮಾಡಿದ್ದರು. ಇದನ್ನು ಗಮನಿಸಿದ ಐಸಿಸಿ ನಿನ್ನೆಯಷ್ಟೆ ತಮ್ಮ ಗ್ಲೌಸ್‌ನಿಂದ ಸೇನಾ ಲಾಂಛನವನ್ನು ತೆಗೆಯುವಂತೆ ಧೋನಿಗೆ ಸೂಚಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮನವಿ ಮಾಡಿದೆ. ಆದರೆ ಧೋನಿ ಬೆನ್ನಿಗೆ ನಿಂತ ಬಿಸಿಸಿಐ, ಧೋನಿ ಧರಿಸಿರುವ ಸೇನಾ ಲಾಂಛನವು ಧಾರ್ಮಿಕ ಅಥವಾ ವಾಣಿಜ್ಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಹೇಳಿ ಗ್ಲೋವ್ಸ್ ಧರಿಸಲು ವಿಶೇಷ ಮನವಿ ಮಾಡಿಕೊಂಡಿತ್ತು. ಆದರೆ ಮನವಿಯನ್ನು ತಿರಸ್ಕರಿಸಿರುವ ಐಸಿಸಿ “ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಜಾಹೀರಾತು ಲೋಗೊ ಹೊಂದಿರಬಹುದು. ಧೋನಿ ಈಗಾಗಲೇ ಎಸ್‌ಜಿ ಲೋಗೊವನ್ನು ಹೊಂದಿದ್ದಾರೆ. ಹೀಗಾಗಿ ಇದು ನಿಯಮದ ಉಲ್ಲಂಘನೆಯಾಗುತ್ತದೆ” ಎಂದು ಐಸಿಸಿ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top