fbpx
ಸಮಾಚಾರ

“ರೌಡಿಶೀಟರ್‌ ಗಳನ್ನು ಇಟ್ಟುಕೊಂಡು ಪಬ್ಲಿಕ್‌ ಟಿವಿ ನಡೆಸುತ್ತಿದ್ದೀರಾ” ರಂಗಣ್ಣನ ವಿರುದ್ಧ ಹರಿಹಾಯ್ದ ಸಿಎಂ HDK.

ಪಬ್ಲಿಕ್‌ ಟಿವಿ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ರಂಗನಾಥ್‌ ಅವರ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿರುದ್ಧ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದೂ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ ಸದಸ್ಯರಿಗೆ ಗೌರವಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು, “ನನ್ನ ಮೇಲೆ ಪಬ್ಲಿಕ್‌ ಟಿವಿ ಸಮಾರಾ ಸಾರಿದ್ದಾರೆ.. ಅವರ ವಾರ್‌ ಎದುರಿಸಲು ನಾನು ರೆಡಿ ಇದ್ದೇನೆ. ನನ್ನ ಬಗ್ಗೆ ಸುಳ್ಳು ಸುದ್ದಿ ಮಾಡ್ತೀರಾ…” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರಂಗನಾಥ್‌ ಅವರೇ, ಜನರ ದಾರಿ ತಪ್ಪಿಸಬೇಡಿ. ನಿಮಗೆ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿದೆ. ರೌಡಿಶೀಟರ್‌ ಗಳನ್ನು ಇಟ್ಟುಕೊಂಡು ಪಬ್ಲಿಕ್‌ ಟಿವಿ ಚಾನೆಲ್ ಅನ್ನು ನಡೆಸುತ್ತಿದ್ದೀರಾ ರಂಗನಾಥ್‌? ಅವರು ನನಗೆ ಪಂಥಾಹ್ವಾನ ಕೊಟ್ಟಿದ್ದಾರೆ. ನಾನು ಸ್ವೀಕರಿಸಿದ್ದೇನೆ. ಅದಕ್ಕೆ ನೇರವಾಗಿ ಮಾತನಾಡುತ್ತಿದ್ದೇನೆ. ನನ್ನ ತಂಟೆಗೆ ಬಂದರೆ ಹುಷಾರ್‌” ಎಂದು ಕುಮಾರಸ್ವಾಮಿ ಹೇಳಿದರು.

“ಒಂದು ಕಾಲದಲ್ಲಿ ನಾವಿಬ್ಬರೂ ಒಳ್ಳೆಯ ಗೆಳೆಯರಾಗಿದ್ದೆವು, ಜೊತೆಗೆ ಕೂತು ಊಟ ಮಾಡಿದ್ದೇವು. ಆದರೆ ಅದೇನಾಗಿದೆಯೋ ಇದೀಗ ಪಬ್ಲಿಕ್‌ ಟಿವಿ ರಂಗನಾಥ್‌ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.. ನಾನು ಮಾಧ್ಯಮಗಳನ್ನು ಮೆಚ್ಚಿಸಲು ನಾನು ಕೆಲಸ ಮಾಡಲು ಆಗುವುದಿಲ್ಲ, ನನಗೆ ಜನರು ಮುಖ್ಯ. ಅಧಿಕಾರಕ್ಕೆ ಬಾಂದಾಗಿನಿಂದಲೂ ಮಾಧ್ಯಮಗಳು ಚಿತ್ರ ಹಿಂಸೆ ನೀಡುತ್ತಿವೆ. ಸರ್ಕಾರ ಈಗ ಬೀಳುತ್ತದೆ, ಆಗ ಬೀಳುತ್ತದೆ, ಆ ಶಾಸಕನಿಗೆ ಅಸಮಾಧಾನವಿದೆ, ಈ ಶಾಸಕನಿಗೆ ಅತೃಪ್ತಿಯಿದೆ ಎನ್ನುತ್ತಿದ್ದಾರೆ. ಆದರೆ, ಮಾಧ್ಯಮಗಳ ಧಾರಾವಾಹಿಯಿಂದ ಸರ್ಕಾರ ಬೀಳುವುದಿಲ್ಲ’ ಎಂದು ಕೆಂಡಕಾರಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top