fbpx
ಸಮಾಚಾರ

ದರ್ಶನ್ ಮನೆ ಮುಂದಿನ ಮರವನ್ನು ಕೊನೆಗೂ ತೆರವುಗೊಳಿಸಿದ ಬಿಬಿಎಂಪಿ.

ಎರಡು ದಿನಗಳಿಂದ ನಗರದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದ ಪರಿಣಾಮ ನಟ ದರ್ಶನ್ ಮನೆ ಮುಂದೆ ಮರ ಬಿದ್ದಿತ್ತು. ಆದರೆ ಎರಡು ದಿನಗಳಾದರೂ ಬಿಬಿಎಂಪಿ ಅವರು ಮರವನ್ನು ತೆರವು ಮಾಡಿರಲಿಲ್ಲ. ಇದೀಗ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುತ್ತಿದ್ದಂತೆ ಮರಗಳನ್ನು ತೆರವು ಮಾಡಿದ್ದಾರೆ.

ಮೂರು ದಿನಗಳ ಹಿಂದೆ ನಗರದಲ್ಲಿ ಭಾರಿ ಮಳೆಯಾಗಿದ್ದರಿಂದ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯ ಕಾಂಪೌಂಡ್​ ಮೇಲೆ ಮರ ಬಿದ್ದಿತ್ತು. ಆದರೆ, ಯಾವ ಅಧಿಕಾರಿಯು ಅತ್ತ ತಿರುಗಿ ನೋಡದಿದ್ದು, ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮಾಧ್ಯಮಗಳು ಇಂದು ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ತಕ್ಷಣವೇ ಮರ ತೆರವುಗೊಳಿಸಿದ್ದಾರೆ.

ಎಲ್ಲ ರೀತಿಯಲ್ಲೂ ಸಬಲರಾಗಿರುವ ಸ್ಯಾಂಡಲ್​ವುಡ್​ ನಟನಿಗೆ ಈ ಗತಿಯಾದರೆ, ಇನ್ನೂ ಸಾಮಾನ್ಯರ ಗತಿಯೇನು ಎಂದು ದರ್ಶನ್​ ಅಭಿಮಾನಿಗಳು ಕೇಳುತ್ತಿದ್ದಾರೆ. ಅದರಲ್ಲೂ ಈ ಕೆಲಸಕ್ಕೆ ಮೂರು ದಿನಗಳಾದರೂ ಯಾರೊಬ್ಬರೂ ತೆರವು ಕಾರ್ಯ ನಡೆಸದಿರಲು ರಾಜಕೀಯ ಕಾರಣಗಳು ಇರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಟ ದರ್ಶನ್​ ಮೇಲೆ ಈ ರೀತಿಯಾಗಿ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top