fbpx
ಸಮಾಚಾರ

ಮೆಟ್ರೋ ಅವಘಡ- ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ನಟಿ.

ಮಲಯಾಳಂ ನಟಿ ಪ್ರಯಾಣ ಮಾಡುತ್ತಿದ್ದ ಕಾರಿನ ಮೇಲೆ ಕಾಮಗಾರಿಯ ಸಿಮೆಂಟ್ ಅವಶೇಷಗಳು ಬಿದ್ದು ಅವಘಡ ಸಂಭವಿಸಿದೆ. ಆದರೆ ಅದೃಷ್ಟವಶಾತ್ ನಟಿ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಮಲಯಾಳಂ ನಟಿ ಅರ್ಚನಾ ಕವಿ ಅಪಾಯದಿಂದ ಪಾರಾಗಿದ್ದಾರೆ.

 

 

ಅರ್ಚನಾ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ನಡೆದ ಘಟನೆ ಹಾಗೂ ಫೋಟೋ ಶೇರ್ ಮಾಡಿಕೊಂಡು ‘ದೊಡ್ಡ ಅಘಾತದಿಂದ ಪಾರಾದೆವು. ಏರ್‌ಪೋರ್ಟ್‌ ಮಾರ್ಗದಲ್ಲಿ ಕಾರು ಚಲಿಸುತ್ತಿದ್ದು ಮೆಟ್ರೋ ಕಾಮಗಾರಿಯಿಂದ ಸಿಮೆಂಟ್ ಕಲ್ಲು ಬಿದ್ದು ಗಾಜಿನ್ನು ಪುಡಿ ಮಾಡಿದೆ. ಯಾರಿಗೂ ಇದರಿಂದ ತೊಂದರೆ ಆಗಿಲ್ಲ. ಆದರೆ ಇಂತಹದ್ದೊಂದು ಕೆಲಸ ಎಂದೂ ಆಗಬಾರದು. ನಾನು ಕೊಚ್ಚಿನ್ ಮೆಟ್ರೋ ಹಾಗೂ ಕೊಚ್ಚಿನ್ ಪೊಲೀಸ್ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ಡ್ರೈವರ್‌ಗೆ ಪರಿಹಾರ ನೀಡಬೇಕು ‘ ಎಂದು ಬರೆದುಕೊಂಡಿದ್ದಾರೆ.

ನಟಿ ಅರ್ಚನಾ ಕವಿ ಟ್ವೀಟ್‍ಗೆ ಮೆಟ್ರೋ ಅಧಿಕಾರಿಗಳು ‘ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಕಾರು ಚಾಲಕನ ಜೊತೆ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡ ಸಂಭವಿಸದಂತೆ ಸುರಕ್ಷಿತವಾಗಿ ಕ್ರಮ ಕೈಗೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top