fbpx
ಸಮಾಚಾರ

ಬಾಡಿಗೆ ವಿವಾದಕ್ಕೆ ತೆರೆ: ಕೊನೆಗೂ ಅದೃಷ್ಟದ ಮನೆ ಖಾಲಿ ಮಾಡಿದ ನಟ ಯಶ್.

ವರ್ಷಾಂತರಗಳಿಂದ ವಾಸಿಸಿದ್ದ ಮನೆಯ ಬಾಡಿಗೆ ಕಟ್ಟದೆ ಸತಾಯಿಸಿದ, ಕೇಳಲು ಹೋದ ಮಾಲೀಕರಿಗೇ ರೋಪು ಹಾಕಿದ ಆರೋಪವೊಂದು ವರ್ಷಗಳ ಹಿಂದೆ ಯಶ್ ವಿರುದ್ಧ ಕೇಳಿ ಬಂದಿತ್ತಲ್ಲಾ? ಇದೀಗ ಈ ಕೇಸ್ ಅಂತ್ಯಗೊಂಡಿದೆ. ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ಯಶ್ ಅವರು ಕೋರ್ಟ್ ಆದೇಶದಂತೆ ಮೇ 31ರೊಳಗೆ ಅದೃಷ್ಟದ ಮನೆ ಎಂದೇ ಕರೆಯಲಾಗಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಇನ್ನೂ ಮನೆ ಖಾಲಿ ಮಾಡದ ಬಗ್ಗೆ ನಿನ್ನೆ ಮಾಧ್ಯಮಗಳು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ಯಶ್ ಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳು ಬಾಡಿಗೆ 80 ಸಾವಿರ ರೂ.ಗಳ ಡಿಡಿಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿ, ಮನೆ ಖಾಲಿ ಮಾಡಿದ್ದಾರೆ. ಕೀ ಪಡೆದ ಬಳಿಕ ಮನೆ ಪರಿಶೀಲನೆ ನಡೆಸಿ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ವಕೀಲ ನಾನಯ್ಯ ಹಿಂಬರಹ ನೀಡಿದ್ದಾರೆ ಎನ್ನಲಾಗಿದೆ.

ಈ ಮೊದಲು ಎರಡು ತಿಂಗಳುಗಳ ಹಿಂದೆಯೇ (ಮಾರ್ಚ್ 31ಕ್ಕೆ) ಯಶ್ ಬಾಡಿಗೆ ಮನೆ ಖಾಲಿ ಮಾಡುವಂತೆ ಮನೆ ಖಾಲಿ ಮಾಡಲು ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು. ಆದರೆ, ಈ ಸಂಬಂಧ ಯಶ್ ಅವರ ತಾಯಿ ಪುಷ್ಪಾ ‘ಹಾಸನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಗೆ ನಮ್ಮ ಕುಟುಂಬ ಶಿಫ್ಟ್ ಆಗಲು ನಿರ್ಧರಿಸಿದ್ದೇವೆ. ಹಾಗಾಗಿ 6 ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಪರ ವಕೀಲರು ಎರಡು ತಿಂಗಳು ಕಾಲಾವಕಾಶ ನೀಡಲು ಒಪ್ಪಿದ್ದರು. ಹಾಗಾಗಿ ಮೇ 31ರ ತನಕ ಹೈಕೋರ್ಟ್ ಕಾಲಾವಕಾಶ ನೀಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top