fbpx
ಸಮಾಚಾರ

ಪಾಕ್ ಮಾತಿಗೆ ಮಣೆ: ಧೋನಿ ಗ್ಲೌಸ್‌ಗೆ ಅನುಮತಿ ನಿರಾಕರಿಸಿದ ಐಸಿಸಿ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯೋಧರ ಬಲಿದಾನದ ಲಾಂಛನವನ್ನು ಹೊಂದಿರುವ ಗ್ಲೌಸ್ ಧರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರಾಕರಿಸಿದೆ.

ಭಾರತೀಯ ಸೇನೆಯ ಬಲಿದಾನವನ್ನು ಸ್ಮರಿಸಿರುವ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇನಾ ಲಾಂಛನದ ಗ್ಲೌಸ್ ಧರಿಸಿ ವಿಶ್ವಕಪ್‌ನಲ್ಲಿ ಆಡುವ ಮೂಲಕ ದೇಶ ನಿವಾಸಿಗಳ ಹೃದಯ ಗೆದ್ದಿದ್ದರು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇದೀಗ ಐಸಿಸಿ ಬ್ಯಾಡ್ಜ್ ತೆಗೆಯುವಂತೆ ಧೋನಿಗೆ ಹಾಗೂ ಬಿಸಿಸಿಐಗೆ ಸೂಚಿಸಿದೆ.

‘ಧೋನಿ ಗ್ಲೌಸ್​ನಲ್ಲಿ ಈ ಚಿನ್ಹೆ ತೆಗೆದು ಹಾಕಿ. ಈ ರೀತಿ ಚಿಹ್ನೆ ಧರಿಸಬೇಕಾದರೆ ತಂಡ ಅಥವಾ ಆಟಗಾರ ಐಸಿಸಿಯಿಂದ ಮೊದಲೇ ಅನುಮತಿ ಪಡೆಯಬೇಕು. ಧೋನಿ ಧರಿಸಿರುವುದು ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ’ ಎಂದು ಹೇಳಿತ್ತು.

ಬಿಸಿಸಿಐ ಮತ್ತೊಮ್ಮೆ ಐಸಿಸಿಗೆ ಧೋನಿ ಅವರು ಬಲಿದಾನ ಬ್ಯಾಡ್ಜ್ ಬಳಸಲು ಅವಕಾಶವನ್ನು ನೀಡುವಂತೆ ಮನವಿ ಮಾಡಿತ್ತು. ಆದರೆ ಐಸಿಸಿ ಮಾತ್ರ ಇದು ನಿಯಮಗಳಿಗೆ ವಿರುದ್ಧವಾಗಿದ್ದು ಇನ್ನು ಬ್ಯಾಡ್ಜ್ ಧರಿಸದಂತೆ ಆದೇಶಿಸಿದೆ. “ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಜಾಹೀರಾತು ಲೋಗೊ ಹೊಂದಿರಬಹುದು. ಧೋನಿ ಈಗಾಗಲೇ ಎಸ್‌ಜಿ ಲೋಗೊವನ್ನು ಹೊಂದಿದ್ದಾರೆ. ಹೀಗಾಗಿ ಇದು ನಿಯಮದ ಉಲ್ಲಂಘನೆಯಾಗುತ್ತದೆ” ಎಂದು ಐಸಿಸಿ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top