fbpx
ಸಮಾಚಾರ

ಭಾರತದಲ್ಲಿ ಸ್ವಂತ ಲಿಪಿ ಪಡೆದ ಮೊದಲ ಭಾಷೆ ಕನ್ನಡ.

ಹೌದು ಕನ್ನಡಿಗರೆಂದು ಹೆಮ್ಮೆಯಿಂದ ಹೇಳಲು ಹಲವಾರು ಕಾರಣಗಳಿದೆ. ಭಾರತದ ಭೂಪಟದಲ್ಲಿ ನಮ್ಮ ಕರ್ನಾಟಕದ್ದು ವಿಶಿಷ್ಠ ಸ್ಥಾನ ಹಾಗೇಯೇ ನಾವು ಮಾತನಾಡುವ ಭಾಷೆ ಕನ್ನಡ! ಕರ್ನಾಟಕ ಭಾರತದ ಭೂಪಟದಲ್ಲಿ ಅನೇಕ ವಿಶಿಷ್ಠ ಘಟನಾವಳಿಗಳು ಮೂಲಕ ಗಮನ ಸೆಳೆದಿದ್ದರೆ ನಮ್ಮ ಕನ್ನಡ ಭಾಷೆ ಕೂಡ ಹಲವು ಮೊದಲುಗಳಿಗೆ ಕಾರಣವಗಿದೆ. ನಾವು ಕನ್ನಡಿಗರೆಂದು ಕನ್ನಡ ಮಾತನಾಡುವರೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಹಲವಾರು ಕಾರಣಗಳಿದೆ.

ಲಿಪಿಯನ್ನು ಹೊಂದಿದ ಮೊದಲ ಭಾಷೆ:
ಅಂತರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಗೆ ತನ್ನದೆ ಆದ ಲಿಪಿಯಿಲ್ಲ! ಇಂಗ್ಲಿಷನ್ನು ರೋಮನ್ ಲಿಪಿಯಲ್ಲಿ ಬರೆಯುತ್ತಾರೆ ಹಾಗೇಯೇ ಹಿಂದಿಗೂ ತನ್ನದೆ ಆದ ಲಿಪಿಯಿಲ್ಲ ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯುತ್ತಾರೆ. ತಮಿಳು ಭಾಷೆಗೆ ಲಿಪಿ ಇದ್ದರೂ ಅದು ಪರಿಪೂರ್ಣವಾಗಿಲ್ಲ ಏಕೆಂದರೆ ಒಂದೇ ಪದವನ್ನು ಹಲವು ಬಾರಿ ಉಚ್ಚರಿಸುವಾಗ ಬಳಸಲಾಗುತ್ತದೆ.

ಆದರೆ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ ಇದು ತುಂಬಾ ಸರಳ ಹಾಗೂ ಸುಂದರ ಭಾಷೆ ನೀವು ಏನನ್ನು ಮಾತನಾಡುತ್ತೀರೋ ಅದನ್ನು ಹಾಗೇಯೇ ಕರಾರುವಕ್ಕಾಗಿ ಬರೆಯಬಹುದು ಹಾಗೇಯೇ ಏನು ಬರೆಯುತ್ತೀರೋ ಅದನ್ನು ಓದಬಹುದು. ಹಾಗಾಗಿಯೇ ಶ್ರೀ ವಿನೋಭಭಾವೆಯವರು ಕನ್ನಡ ಭಾಷೆಯನ್ನು “ವಿಶ್ವಲಿಪಿಗಳ ರಾಣಿ” ಎಂದು ಬಣ್ಣಿಸಿದ್ದರು.

ಅಮೋಘ ವರ್ಷ ಕವಿರಾಜಮಾರ್ಗ ವನ್ನು ಬರೆದಾಗ ಇಂಗ್ಲೀಷ್ ಭಾಷೆ ಇನ್ನು ತೊಟ್ಟಿಲಲ್ಲಿ ಇದ್ದರೆ ಹಿಂದಿ ಇನ್ನೂ ಹುಟ್ಟೇ ಇರಲಿಲ್ಲ “ಕಾವೇರಿಯಿಂದ ಗೋದಾವರಿಯವರೆಗಿರ್ಪ ಎಂದು ಅಮೋಘ ವರ್ಷ ಹೇಳಿದಂತೆ ಕನ್ನಡ ಭಾಷೆ ಆಗಲೇ ಕಾವೇರಿಯಿಂದ ಗೋದಾವರಿಯ್ವರೆಗೂ ತನ್ನ ಕಂಪನ್ನು ಬೀರಿತ್ತು.ವಿದೇಶಿಯರವರೊಬ್ಬರು ಶಬ್ದಕೋಶವನ್ನು ರಚಿಸಿಕೊಂಡ ಭಾರತದ ಏಕಮಾತ್ರ ಭಾಷೆ ಕನ್ನಡವಾಗಿದ್ದು ಇದನ್ನು ಬರೆದವರು “ಕಿಟ್ಟಲ್” ಕಿಟ್ಟಲ್ ಶಬ್ಧಕೋಷ ಎಂದು ಇಂದಿಗೂ ಪ್ರಸಿದ್ಧವಾಗಿದೆ.

ರಗಳೆಸಾಹಿತ್ಯ ಕನ್ನಡದ ಭಾಷೆಯಲ್ಲಿ ಬಿಟ್ಟರೆ ಭಾರತದ ಬೇರೆ ಯಾವ ಭಾಷೆಯಲ್ಲಿ ಹುಡುಕಿದರೂ ನಿಮಗೆ ಸಿಗುವುದಿಲ್ಲ! ರಗಳೆ ಸಾಹಿತ್ಯ ವಿಷಿಷ್ಟ ಹಾಗೂ ವಿಭಿನ್ನ ರೀತಿಯ ಸಾಹಿತ್ಯವಾಗಿದೆ.

ಸಾಹಿತ್ಯಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಶಸ್ತಿಯನ್ನು ಪಡೆದವರು ಕರ್ನಾಟಕದ ಕುವೆಂಪುರವರು, ಬೇರೆ ಯಾವ ಭಾಷೆಯ ಸಾಹಿತಿಗಳಿಗೂ ಸಾಹಿತ್ಯಕ್ಷೇತ್ರದಲ್ಲಿ ಇಷ್ಟೊಂದು ಪ್ರಶಸ್ತಿಯನ್ನು ಪಡೆಯದೇ ಕನ್ನಡದ ಕುವೆಂಪುರವರಿಗೆ ಲಭಿಸಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top