fbpx
ಸಮಾಚಾರ

ಟ್ವಿಟ್ಟರ್ ಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತ್ ಶೆಟ್ಟಿಗೆ ಕಿವಿಮಾತು ಹೇಳಿದ ನವರಸನಾಯಕ ಜಗ್ಗೇಶ್.

ಬಿಡುವಿಲ್ಲದ ಕೆಲಸಗಳ ಕಾರಣದಿಂದಾಗಿ ಸೋಷಿಯಲ್‌ ಮೀಡಿಯಾಗಳಿಂದ ದೂರವಿದ್ದ ನಟ ರಕ್ಷಿತ್‌ ಶೆಟ್ಟಿ, ಈಗ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಬಂದಿದ್ದಾರೆ. ಸುಮಾರು ಒಂದು ವರ್ಷ ಸಾಮಾಜಿಕ ಜಾಲತಾಣದಿಂದ ದೂರವಿದ್ದ ರಕ್ಷಿತ್ ಸೋಶಿಯಲ್ ಮೀಡಿಯಾಗೆ ರೀ ಎಂಟ್ರಿ ಕೊಡುತ್ತಾ ತಮ್ಮ ಮೊದಲ ಟ್ವೀಟ್ ನಲ್ಲಿಯೇ ಧೂಳೆಬ್ಬಿಸಿದ್ದಾರೆ.

ಒಂದು ವರ್ಷದ ಬಳಿಕ ಟ್ವೀಟ್ ಮಾಡಿದ ರಕ್ಷಿತ್ “ಚಂಡಮಾರುತ ಏಳುವುದಕ್ಕೂ ಮುನ್ನ ಮೌನವಾಗಿರುತ್ತದೆಯೇ?” ಎಂದು ಪ್ರಶ್ನಿಸುವ ಮೂಲಕ ಮತ್ತೆ ಬಂದಿದ್ದಾರೆ.

ಟ್ವಿಟ್ಟರ್ ನಲ್ಲಿ ರಕ್ಷಿತ್ ಮೊದಲ ಟ್ವೀಟ್ ಗೆ ಪ್ರತಿಕ್ರಿಯಿಸುತ್ತಾ, ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ನವರಸನಾಯಕ ಜಗ್ಗೇಶ್ ರಕ್ಷಿತ್ ಗೆ ಕಿವಿಮಾತೊಂದನ್ನು ಹೇಳಿದ್ದಾರೆ….

“ತಾಳಿದವ ಬಾಳುತ್ತಾನೆ!
ಮೌನ ಹರಿತವಾದ ಆಯುಧ!
ನಗು ಎಲ್ಲಾಗುಣಕ್ಕು ಶ್ರೇಷ್ಟಉತ್ತರ!
ತನ್ನಂಬಿಕೆ ಇದ್ದವ ಜಗಗೆಲ್ಲುವ!
ಅಪಮಾನ ಗೆಲುವಿಗೆ ರಹದಾರಿ!

ಮಾತಿಗಿಂತ ಕೃತಿಶ್ರೇಷ್ಟ!
ಆರ್ಭಟಿಸುವವ ಆಂತರ್ಯದಲ್ಲಿ ಭಯಸ್ತ!
ಗೆಲ್ಲುವ ಛಲದವ ಸದ್ದುಮಾಡದವ!
ಈ ಎಲ್ಲಾಗುಣ ನಿನ್ನಲ್ಲಿದೆ!ಮುಂದಿನ ಗೆಲುವು ನಿನ್ನದೆ!
ಹುಟ್ಟುಹಬ್ಬದ ಶುಭಾಷಯಗಳು” ಎಂದು ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ರಕ್ಷಿತ್ ಅವರನ್ನು ಹುರಿದುಂಬಿಸಿದ್ದಾರೆ.,

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top