fbpx
ಸಮಾಚಾರ

ಕೊಹ್ಲಿಯನ್ನು ‘ಕಿಂಗ್’ ಎಂದಿದ್ದಕ್ಕೆ ಟೀಕಿಸಿದ್ದ ಮೈಕಲ್ ವಾನ್‌ಗೆ ಐಸಿಸಿ ತಿರುಗೇಟು.

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಕೊಹ್ಲಿ ಸೈನ್ಯ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. . ಸೌತ್ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಐಸಿಸಿ ವಿರಾಟ್ ಕೊಹ್ಲಿ ಫೋಟೋ ಪೋಸ್ಟ್ ಮಾಡಿತ್ತು. ರಾಜನಂತೆ ಚಿತ್ರಿಸಿರುವ ಫೋಟೋ ಹಾಕಿದ ಐಸಿಸಿಯನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಪ್ರಶ್ನಿಸಿದ್ದರು. ಇದೀಗ ಐಸಿಸಿ ತಕ್ಕ ತಿರುಗೇಟು ನೀಡಿದೆ.

 

 

ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋಟೋವನ್ನು ಪ್ರಕಟಿಸಿ ‘ಕಿಂಗ್ ಕೊಹ್ಲಿ’ ಎಂದು ಬರೆದು ಟ್ವಿಟ್ಟರ್ ನಲ್ಲಿ ಐಸಿಸಿ ಶೇರ್ ಮಾಡಿತ್ತು.. ಈ ಮದ್ಯೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಂತೂ ಐಸಿಸಿ ಒಂದು ತಂಡದ ನಾಯಕನ ಫೋಟೋ ಮಾತ್ರ ಪ್ರಕಟಿಸಿ ಬೇಧ ಮಾಡುತ್ತಿದೆ” ಎಂದು ಆರೋಪಿಸಿದ್ದರು.

 

 

ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿ, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಎಂದು ಪ್ರತಿಕ್ರಿಯೆ ನೀಡಿದೆ. ‘ಸದ್ಯ ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ ಚಿತ್ರವನ್ನು ಪ್ರಕಟಿಸಿದ್ದೇವೆ. ಇದರಲ್ಲಿ ತಾರತಮ್ಯ ಎಲ್ಲಿದೆ’ ಎಂದು ಐಸಿಸಿ ತಿರುಗೇಟು ನೀಡಿದೆ.ಐಸಿಸಿ ತಿರುಗೇಟಿಗೆ ಟ್ವಿಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top