fbpx
ಸಮಾಚಾರ

ಸೇನೆ ಗೌರವಾರ್ಥ ಗ್ಲೌಸ್‌ ಮೇಲೆ ಧೋನಿ ಹಾಕಿಸಿದ್ದ ಸೇನೆ ಚಿಹ್ನೆ ತೆಗೆಯಲು ಐಸಿಸಿ ಸೂಚನೆ.

ಭಾರತೀಯ ಸೇನೆಯ ಬಲಿದಾನವನ್ನು ಸ್ಮರಿಸಿರುವ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇನಾ ಲಾಂಛನದ ಗ್ಲೌಸ್ ಧರಿಸಿ ವಿಶ್ವಕಪ್‌ನಲ್ಲಿ ಆಡುವ ಮೂಲಕ ದೇಶ ನಿವಾಸಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಭಾರತೀಯ ಸೇನೆಯ ಗೌರವಾರ್ಥ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ವಿಶೇಷವಾಗಿ ತಯಾರಿಸಿದ ಇಂಡಿಯನ್ ಆರ್ಮಿ ಕ್ಯಾಪ್ ಧರಿಸಿ ಅಂಗಣಕ್ಕಿಳಿದಿದ್ದರು. ಇದೀಗ ಇದೇ ಸೇನೆ ಲೋಗೋ ಧೋನಿಗೆ ಸಂಕಷ್ಠ ತಂದಿದೆ.

 

 

ಧೋನಿ ಗ್ಲೌಸ್ ಮೇಲಿನ ಸೇನೆ ಚಿಹ್ನೆ ತೆಗೆಯಲು ಐಸಿಸಿ, ಬಿಸಿಸಿಐಗೆ ಸೂಚಿಸಿದೆ. ಐಸಿಸಿ ಜನರಲ್ ಮ್ಯಾನೇಜರ್ ಕ್ಲಾರಿ ಫರ್ಲಾಂಗ್ ಬಿಸಿಸಿಐಗೆ ಸೂಚನೆ ನೀಡಿದ್ದಾರೆ. ಐಸಿಸಿ ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟಗಾರ, ಕೋಚ್ ತಮ್ಮ ಉಡುಪು, ಬ್ಯಾಟ್, ವಿಕೆಟ್ ಅಥವಾ ಯಾವುದೇ ಕ್ರಿಕೆಟ್ ಸಂಬಂಧಿತ ವಸ್ತುಗಳ ಮೇಲೆ ವೈಯುಕ್ತಿ ಸಂದೇಶ, ರಾಜಕೀಯ, ಧಾರ್ಮಿಕ, ಜನಾಂಗೀಯ ಸಂಬಂಧಿಸಿದ ಸಂದೇಶಗಳನ್ನು, ಲೋಗೋ ಅಥವಾ ಚಿತ್ರಗಳನ್ನು ಹಾಕುವಂತಿಲ್ಲ.

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಲೋಗೋ, ಆಯಾ ಕ್ರಿಕೆಟ್ ಸಂಸ್ಥೆ ಲೋಗೋ, ದೇಶದ ಹೆಸರು, ಆಟಗಾರನ ಹೆಸರು ಹಾಗೂ ಐಸಿಸಿ ಪ್ರಾಯೋಜಕತ್ವ ಮಾತ್ರ ನಮೂದಿಸಬೇಕು. ಆದ್ದರಿಂದ ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲಿನ ಸೇನೆಯ ಬಲಿದಾನದ ಲೋಗೋ ತೆಗೆಯಲು ಐಸಿಸಿ, ಬಿಸಿಸಿಐ ಬಳಿ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top