fbpx
ಸಮಾಚಾರ

ಕೊಹ್ಲಿಗೆ ದಂಡ ವಿಧಿಸಿದ ಗುರುಗ್ರಾಮ ಪುರಸಭೆ: ಕಾರಣವೇನು? ದಂಡದ ಮೊತ್ತ ಎಷ್ಟು ಗೊತ್ತಾ?

ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಇರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಗುರುಗ್ರಾಮ ಮುನಿಸಿಪಲ್ ಕಾರ್ಪೋರೇಶನ್ 500 ರೂ. ದಂಡ ವಿಧಿಸಿದೆ. ಗುರುಗ್ರಾಮದಲ್ಲಿರುವ ಕೊಹ್ಲಿ ಮನೆಯಲ್ಲಿ ಅವರ ಕಾರುಗಳನ್ನು ತೊಳೆಯಲು ಕುಡಿಯುವ ನೀರು ಬಳಕೆ ಮಾಡಿದ ಕಾರಣಕ್ಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

500 ರೂಪಾಯಿ ದಂಡ:
ಕೊಹ್ಲಿ ಮನೆಯಲ್ಲಿ ಅಲ್ಲಿನ ಕೆಲಸಗಾರರು ನಿಯಮ ಉಲ್ಲಂಘಿಸಿ ಕಾರುಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿದ ಕಾರಣ ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದು, ದೀಪಕ್ ಎಂಬ ಕೆಲಸಗಾರನ ಹೆಸರಿನಲ್ಲಿ ಚಲನ್ ನೀಡಿದ್ದಾರೆ.

ಕೊಹ್ಲಿ ನಿವಾಸದ ಸನಿಹ ಇರುವ ಸ್ಥಳೀಯರು ಈ ಬಗ್ಗೆ ಕಾರ್ಪೋರೇಶನ್‍ಗೆ ದೂರು ನೀಡಿದ್ದು, ಈ ದೂರಿನಲ್ಲಿ ಕೊಹ್ಲಿ ನಿವಾಸದಲ್ಲಿ ಇರುವ ಅರ್ಧ ಡಜನ್ ಕಾರುಗಳನ್ನು ಸಾವಿರಾರು ಲೀಟರ್ ಕುಡಿಯುವ ನೀರನ್ನು ಬಳಸಿ ತೊಳೆಯುತ್ತಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಅನ್ವಯ ಸದ್ಯ ಕ್ರಮಕೈಗೊಳ್ಳಲಾಗಿದೆ.

ಉತ್ತರ ಭಾರತದಲ್ಲಿ ಈ ಬಾರಿ ಒಣ ಹವೆ ಹೆಚ್ಚಿದ್ದು, ಕುಡಿಯುವ ನೀರಿನ ಕೊರೆತೆ ಹೆಚ್ಚಾಗಿದೆ. ಹೀಗಾಗಿ ಗುರುಗ್ರಾಮದ ಈ ಭಾಗದಲ್ಲಿ ಕುಡಿಯುವ ನೀರನ್ನು ಪೋಲು ಮಾಡುವವರ ವಿರುದ್ಧ ಅಲ್ಲಿನ ಮುನ್ಸಿಪಾಲ್‌ ಕಾರ್ಪೊರೇಷನ್ ಕಠಿಣ ಕ್ರಮ ಕೈಗೊಳ್ಳುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top