fbpx
ಸಮಾಚಾರ

ವಿಂಡೀಸ್ ದೈತ್ಯ ಹಿಡಿದ ಅತ್ಯದ್ಭುತ ಕ್ಯಾಚ್ ಕಂಡು ನಿಬ್ಬೆರಗಾದ ಕ್ರಿಕೆಟ್ ಜಗತ್ತು- ವಿಡಿಯೋ ವೈರಲ್.

ಕ್ರಿಕೆಟ್ ನಲ್ಲಿ ಫೀಲ್ಡರ್ಸ್’ಗಳು ಆಗಾಗ್ಗೆ ಪಡೆಯುವ ಕೆಲ ಅದ್ಭುತ ಕ್ಯಾಚ್’ಗಳು ನೋಡುಗರ ಹುಬ್ಬೇರುಸುತ್ತವೆ. ಅಸಾಧ್ಯವೆನಿಸುವ ಕ್ಯಾಚ್ ಗಳನ್ನೂ ನಂಬೋದಕ್ಕೆ ಆಗದ ರೀತಿ ಹಿಡಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಇದೀಗ ಅಂಥಾ ಅದ್ಭುತ ಕ್ಯಾಚುಗಳ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು ಇದಕ್ಕೆ ಸಂಭಂದಿಸಿದ ವಿಡಿಯೋವೊಂದು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಒಂದು ವಾರ ತಲುಪಿರುವಂತೆಯೇ ಈಗಾಗಲೇ ಅನೇಕ ಅತ್ಯುದ್ಭುತ ಕ್ಯಾಚ್‌ಗಳನ್ನು ನೋಡಿದ್ದೇವೆ. ಆದರೆ ಇದೀಗ ಗುರುವಾರ ಆಸ್ಟ್ರೇಲಿಯಾ ಹಾಗೂ ವೆಸ್ಟ್‌ಇಂಡೀಸ್ ನಡುವಣ ಪಂದ್ಯ ವೀಕ್ಷಿಸಿದವರೆ ವಾವ್ ಅನಿಸುವಂತಿದೆ. ನಿನ್ನೆ ಆಸ್ಟ್ರೇಲಿಯಾ ಹಾಗೂ ವೆಸ್ಟ್‌ಇಂಡೀಸ್ ನಡುವಣ ಪಂದ್ಯದಲ್ಲಿ ಟೂರ್ನಿಯ ಅದ್ಭುತ ಕ್ಯಾಚ್ ವೊಂದು ದಾಖಲಾಗಿದೆ. ವೆಸ್ಟ್‌ಇಂಡೀಸ್ ನ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಹಿಡಿದಿರುವ ಈ ಅದ್ಭುತ ಕ್ಯಾಚ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಸ್ವೀವನ್​ ಸ್ಮಿತ್​ ಅವರು ಬಾರಿಸಿದ ಭರ್ಜರಿ ಹೊಡೆವು ಇನ್ನೇನೋ ಬೌಂಡರಿ ಲೈನ್​ ಸೇರಿತ್ತು ಎಂದು ಹೇಳುತ್ತಿರುವಾಗಲೇ ಒಂದು ಚಮತ್ಕಾರ ನಡೆದಿದೆ. ಒಶೇನ್ ಥಾಮಸ್ ಎಸೆತವನ್ನು ಭರ್ಜರಿ ಆಗಿ ಹೊಡೆತ ಇನ್ನೇನೊ ಬೌಂಡರಿ ಲೈನ್​ ಗೆರೆ ದಾಟಬೇಕಿದ್ದ ಚೆಂಡನ್ನು ಶೆಲ್ಡನ್ ಕಾಟ್ರೆಲ್ ಹಿಡಿದ ಕ್ಯಾಚ್​ ಆಶ್ಚರ್ಯ ಪಡುವ ರೀತಿಯಲ್ಲಿತ್ತು. ಬ್ಯಾಟ್ಸ್​​ಮೆನ್​ಗೆ ನಂಬಲಿಕೆ ಅಸಾಧ್ಯವಾಗುಂತೆ ಕ್ಯಾಚ್​ ತೆಗೆದುಕೊಂಡ ಶೆಲ್ಡನ್ ಕಾಟ್ರೆಲ್​ರನ್ನು ತಂಡದ ಆಟಗಾರರು ಅಭಿನಂದನೆ ಸಲ್ಲಿಸಿದ್ದರು.

 

 

ಬೌಂಡರಿ ಗೆರೆ ಬಳಿ ಗಾಳಿಯಲ್ಲಿ ಹಾರಿದ ಕಾಟ್ರೆಲ್ ಒಂದು ಕೈಯಲ್ಲಿ ಕ್ಯಾಚ್ ಹಿಡಿದು ಇನ್ನೇನು ಸಮತೋಲನ ತಪ್ಪಿ ಬೌಂಡರಿ ಗೆರೆ ದಾಟುತ್ತಿದ್ದೇನೆ ಎನ್ನುವಷ್ಟರಲ್ಲಿ ಚೆಂಡನ್ನು ಮೇಲಕ್ಕೆ ಎಸೆದರು. ಬಳಿಕ ಬೌಂಡರಿ ಗೆರೆಯಿಂದ ಒಳಗೆ ಬಂದು ಮೈದಾನದೊಳಗೆ ನುಗ್ಗಿ ಚೆಂಡನ್ನು ಹಿಡಿದರು. ಆ ಮೂಲಕ ಸ್ಮಿತ್ ಯಾರೂ ಊಹಿಸದ ರೀತಿಯಲ್ಲಿ ಔಟ್ ಆಗಿ ಭಾರವಾದ ಮನಸ್ಸಿನಿಂದಲೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅಂತೆಯೇ ಬಳಿಕ ತಮ್ಮ ಎಂದಿನ ಸೆಲ್ಯೂಟ್ ಶೈಲಿಯಲ್ಲಿ ಸಂಭ್ರಮಾಚರಿಸುವ ಮೂಲಕ ಕಾಟ್ರೆಲ್ ಗಮನ ಸೆಳೆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top