fbpx
ಸಮಾಚಾರ

ಬಯೋಮೆಟ್ರಿಕ್ ಯಂತ್ರ ಕೆಟ್ಟಿದ್ದಕ್ಕೆ 3 ತಿಂಗಳು ರೇಷನ್ ಕೊಡಲಿಲ್ಲ- ಹಸಿವಿನಿಂದ ವೃದ್ಧ ಸಾವು.

ಸರಕಾರ ರೇಶನ್ ನೀಡಲು ಮಾಡಿಕೊಂಡ ವ್ಯವಸ್ಥೆಯ ಲೋಪ ವ್ಯಕ್ತಿಯ ಜೀವವನ್ನೆ ಬಲಿ ಪಡೆದುಕೊಂಡಿದೆ. ಜಾರ್ಖಂಡ್ ರಾಜ್ಯದ ಲಥಾರ್ ಜಿಲ್ಲೆಯ 65 ವರ್ಷದ ರಾಮ್ ಚರಣ ಮುಂಡಾ ಆಹಾರ ದೊರೆಯದೆ ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜಾರ್ಖಂಡ್ ಸಮೀಪದ ಲಾತೆಹರ್ ಎಂಬಲ್ಲಿ ಈ ಘಟನೆ ನಡೆದಿದೆ. 65 ವರ್ಷ ವಯಸ್ಸಿನ ರಾಂಚರಣ್ ಮುಂಡಾ ಮೃತಪಟ್ಟ ವೃದ್ಧ. ಬಯೋಮೆಟ್ರಿಕ್ ಯಂತ್ರ ಕೆಟ್ಟಿದೆ ಎಂಬ ಕಾರಣಕ್ಕಾಗಿ ಕಳೆದ ಮೂರು ತಿಂಗಳಿಂದ ಈ ಕುಟುಂಬಕ್ಕೆ ಯಾವುದೇ ಆಹಾರ ಸಾಮಗ್ರಿಗಳನ್ನು ನ್ಯಾಯಬೆಲೆ ಅಂಗಡಿಯವರು ನೀಡಿಲ್ಲ ಎಂದು ವೃದ್ದನ ಮಗಳು ಮಾಧ್ಯಮದವರಿಗೆ ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ತಂದೆ ಆಹಾರ ಸೇವಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಂಚರಣ್ ಮುಂಡಾ ಅವರ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಅಡುಗೆ ಮಾಡಿರಲಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಮೂರು ತಿಂಗಳಿನಿಂದ ಆಹಾರ ಪದಾರ್ಥ ವಿತರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಆದರೆ ಜಿಲ್ಲಾಡಳಿತ ಈ ಆರೋಪವನ್ನು ಅಲ್ಲಗಳೆದಿದೆ. ಅತಿಯಾದ ಮದ್ಯಸೇವನೆ ಚಟ ಅಂಟಿಸಿಕೊಂಡಿದ್ದರಿಂದ ಮುಂಡಾ ಸಾವಿಗೀಡಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಎರಡು ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಎಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top