fbpx
ಸಮಾಚಾರ

”ರಾಬರ್ಟ್ ಪೋಸ್ಟರ್ ಕಾಪಿ ಅಲ್ಲ” ನಿರ್ದೇಶಕ ತರುಣ್​ ಸುಧೀರ್ ಸ್ಪಷ್ಟನೆ.

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಸಿನಿಮಾದ ಪೋಸ್ಟರ್ ನಿನ್ನೆಯಷ್ಟೆ ಈದ್​ ಅಂಗವಾಗಿ ಬಿಡುಗಡೆಯಾಗಿದ್ದು, ಸದ್ಯದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ದಚ್ಚು ಅಭಿಮಾನಿಗಳ ಕ್ರೇಜ್​ ಎಷ್ಟಿದೆ ಅಂದರೆ ‘ರಾಬರ್ಟ್​’ ಪೋಸ್ಟರ್​ ಅನ್ನು ಹೇಗಾದರೂ ಮಾಡಿ ವೈರಲ್​ ಮಾಡಲೇಬೇಕು ಅಂತ ನಿರ್ಧರಿಸಿಬಿಟ್ಟಿದ್ದಾರೆ.

ಆದರೆ ಈ ಮದ್ಯೆ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟರ್ ನಕಲಿ ಎಂಬ ಸುದ್ದಿ ಕೇಳಿ ಬಂದಿದೆ. ಈ ಪೋಸ್ಟರ್​ ಅನ್ನು ನಕಲು ಮಾಡಲಾಗಿದೆ ಎಂಬ ಮಾತು ಹರಿದಾಡುತ್ತಿದೆ. ಪೋಸ್ಟರ್ ನಲ್ಲಿ ದರ್ಶನ್ ಬೈಕ್ ಮೇಲೆ ಕುಳಿತಿದ್ದಾರೆ. ಹಿಂದಿನಿಂದ ಆ ಚಿತ್ರ ತೆಗೆಯಲಾಗಿದೆ. ರಾಬರ್ಟ್ ಪೋಸ್ಟರ್ ಅನ್ನೇ ಹೋಲುವ ಫೋಟೋವನ್ನು ಹಾಲಿವುಡ್ ನಟ ಡ್ವೇಯ್ನ್ ಜಾನ್ಸನ್ ಕಳೆದ ತಿಂಗಳು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.. ಈ ಫೋಟೋವನ್ನೇ ರಾಬರ್ಟ್ ತಂಡದವರು ಕಾಪಿ ಮಾಡಿದರೆ ಎಂಬ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ..

ಕುರಿತಂತೆ ನಿರ್ದೇಶಕ ತರುಣ್​ ಸುಧೀರ್​ ಸಹ ಹೇಳಿಕೆ ನೀಡಿದ್ದು,”ಆದರ್ಶ್ ಮೋಹನ್​ ಎಂಬುವರು ರಾಬರ್ಟ್​ ಪೋಸ್ಟರ್​ ಅನ್ನು ಡಿಸೈನ್​ ಮಾಡಿದ್ದು, ನಾವು ಮೊದಲೇ ವಿನ್ಯಾಸಗೊಳಿಸಿದ್ದೆವು. ನಟ ಡ್ವೇಯ್ನ್ ಜಾನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆ ಫೋಟೋ ಹಾಕಿದ್ದು, ಮೇ 15 ರಂದು. ಆದರೆ, ನಾವು ಮೇ 6 ರಂದೇ ನಮ್ಮ ಪೋಸ್ಟರ್ ಶೂಟ್ ಮುಗಿಸಿದ್ದೆವು. ಹೀಗಾಗಿ ಇದು ಕಾಪಿ ಮಾಡಿದ್ದು ಅಲ್ಲ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top