fbpx
ಸಮಾಚಾರ

ಸುಮನ್ ರಂಗನಾಥ್‌ಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ.

ನಟಿ ಸುಮನ್ ರಂಗನಾಥನ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಉದ್ಯಮಿ ಸಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಸ್ನೇಹಿತರು, ಆತ್ಮೀಯರ ಸಮ್ಮುಖದಲ್ಲಿ ಸುಮನ್ ಹಾಗೂ ಸಜನ್ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದಾರೆ.

ಮದುವೆ ಅಥವಾ ಪ್ರೀತಿಯ ಬಗೆಗೆ ನಟಿ ಇದುವರೆಗೆ ಯಾವ ವಿಚಾರವನ್ನೂ ಹಂಚಿಕೊಂಡಿಲ್ಲದ ಸುಮನ್ ಸೋಮವಾರ ಕುಟುಂಬ ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ರಿಜಿಸ್ಟರ್ ವಿವಾಹವಾಗಿದ್ದಾರೆ. ಮೂಲತಃ ಕೊಡಗಿನವರಾದ ಉದ್ಯಮಿ ಸಜನ್ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

“ನನ್ನ ಹಾಗೂ ಸಜನ್ ಭೇಟಿ 8 ತಿಂಗಳ ಹಿಂದೆ ಆಕಸ್ಮಿಕವಾಗಿ ಆಗಿತ್ತು, ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಸ್ನೇಹ ಪ್ರೇಮಕ್ಕೆ ತಿರುಗಲು ಜಾಸ್ತಿ ಸಮಯ ಹಿಡಿಯಲಿಲ್ಲ,. ನಂತರ ಮದುವೆಯಾಗಬೇಕೆಂದು ನಿರ್ಧರಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿತ್ತಿದ್ದೇವೆ” ಎಂದು ಸುಮನ್ ರಂಗನಾಥನ್ ಹೇಳಿದ್ದಾರೆ.

ಸಿ.ಬಿ.ಐ ಶಂಕರ್, ಡಾಕ್ಟರ್ ಕೃಷ್ಣ, ನಮ್ಮೂರ ಹಮ್ಮೀರ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯ್ತಿಸಿದ್ದ ನಟ್ ಸುಮನ್ ರಂಗನಾಥನ್ ಬಿಂದಾಸ್, ಬುದ್ಧಿವಂತ, ಸಿದ್ಲಿಂಗು, ಸವಾರಿ, ಕಟಾರಿ ವೀರ ಸುರಸುಂದರಾಂಗಿ, ನೀರ್ ದೋಸೆ ಸೇರಿ ಇತ್ತೀಚಿನ ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top