fbpx
ಸಮಾಚಾರ

ನೆಟ್ಟಿಗರಲ್ಲಿ ವಿಶೇಷ ಮನವಿ ಮಾಡಿಕೊಂಡ ಶ್ರುತಿ ಮಗಳು ಗೌರಿ.

ನಟಿ ಶ್ರುತಿ ಮಗಳು ಗೌರಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮೊನ್ನೆ ತಂದೆಯ ಬಗ್ಗೆ ಬರೆದು ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದರು.. ಇದರಿಂದ ನೆಟ್ಟಿಗರು ಶ್ರುತಿ ವಿರುದ್ಧ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದರು. ಇದನ್ನು ಗಮನಿಸಿರುವ ಗೌರಿ ಮತ್ತೊಂದು ಪೋಸ್ಟ್ ಹಾಕಿದ್ದು ‘ಇನ್ನೊಬ್ಬರ ಜೀವನದ ಬಗ್ಗೆ ವಿನಾಕಾರಣ ಕಾಮೆಂಟ್ಸ್ ಮಾಡಬೇಡಿ’ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

 

ಈ ಬಗ್ಗೆ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಗೌರಿ, “ಇತ್ತೀಚಿಗೆ ನಾನು ಅಪ್ಪನ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಒಂದು ಪೋಸ್ಟ್ ಹಾಕಿದ್ದೆ. ಆದರೆ ಆ ಪೋಸ್ಟ್ ಗೆ ಅಮ್ಮನ ವಿರುದ್ಧ ಕಾಮೆಂಟ್ ಮಾಡುತ್ತಿದ್ದಾರೆ. ಅದನ್ನು ನೋಡಿ ನನಗೆ ಬೇಸರವಾಗಿದೆ. ಅಪ್ಪನಿಗೆ ಫೋನ್ ಮಾಡಲು, ಅವರನ್ನು ಭೇಟಿ ಮಾಡಲು ಅಮ್ಮನೇ ಕಳುಹಿಸುವುದು. ನಾನು ಮಾಡಿದ್ದ ಪೋಸ್ಟ್ ಅಪ್ಪನ ಬಗ್ಗೆ ಇದ್ದ ಪ್ರೀತಿಯನ್ನು ತಿಳಿಸುತ್ತದೆ ಹೊರತು ಅಮ್ಮನ ಬಗ್ಗೆ ಇರುವ ಬೇಸರವಲ್ಲ. ಹೀಗಾಗಿ ದಯವಿಟ್ಟು ಅಮ್ಮನ ಬಗ್ಗೆ ಕಾಮೆಂಟ್ಸ್ ಮಾಡಬೇಡಿ” ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

“ ಅಪ್ಪ ನನ್ನ ಹುಟ್ಟಿಗೆ ಮಾತ್ರ ಕಾರಣರಾಗಿದ್ದಾರೆ. ಆದರೆ ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಪ್ರೀತಿಯಿಂದ ನನ್ನನ್ನು ನೋಡಿಕೊಳ್ಳುತ್ತಿರುವುದು ನನ್ನ ಅಮ್ಮ. ಅವರ ಬಗ್ಗೆ ಗೊತ್ತಿಲ್ಲದೆ ಏನನ್ನೇ ಮಾತನಾಡುವುದು ತಪ್ಪು. ಇಬ್ಬರನ್ನು ನಾನು ಸಮಾನವಾಗಿ ಪ್ರೀತಿಸುತ್ತೇನೆ. ನಿಮಗೆ ಸತ್ಯ ತಿಳಿಯದೆ ಮಾತನಾಡುವುದು ಸರಿಯಿಲ್ಲ.. ಏನೂ ಗೊತ್ತಿಲ್ಲದೇ ಇನ್ನೊಬ್ಬರ ಜೀವನದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ” ಎಂದು ಗೌರಿ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಗೌರಿ ಮಾಡಿದ್ದ ಪೋಸ್ಟ್ ಏನು?
“ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀವು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕನಾಗಿದ್ದೀರಿ. ನಿಮ್ಮ ಮೇಲಿನ ಪ್ರೀತಿ ಹಾಗೂ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೊತೆ ಕಾಲ ಕಳೆಯಲು ಕಾಯುತ್ತೀದ್ದೀನಿ” ಎಂದು ಪ್ರೀತಿಯಿಂದ ಬರೆದು ಪೋಸ್ಟ್ ಮಾಡಿದ್ದರು.

ಅಂದಹಾಗೆ ಶ್ರುತಿ ಅವರು 1998ರಲ್ಲಿ ನಿರ್ದೇಶಕ ಎಸ್.ಮಹೇಂದರ್ ಜೊತೆ ಮದುವೆ ಮಾಡಿಕೊಂಡಿದ್ದರು. ಆದರೆ ಕೌಟುಂಬಿಕ ಕಾರಣದಿಂದಾಗಿ 2009ರಲ್ಲಿ ಶ್ರುತಿ ಮತ್ತು ಎಸ್.ಮಹೇಂದರ್ ಇಬ್ಬರು ಡೈವೋರ್ಸ್ ಪಡೆದುಕೊಂಡಿದ್ದರು. ಅಂದಿನಿಂದ ಮಗಳು ಗೌರಿ ಜೊತೆ ತನ್ನ ತಾಯಿ ಶ್ರುತಿ ಜೊತೆಯೇ ಜೀವನ ನಡೆಸುತ್ತಿದ್ದಾರೆ, ಇತ್ತ ವಿಚ್ಛೇದನದ ಬಳಿಕ ಎಸ್.ಮಹೇಂದರ್ ಅವರು ಮತ್ತೊಂದು ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top