fbpx
ಸಮಾಚಾರ

“ಮಹಾತ್ಮ ಗಾಂಧಿ ಕಾಲದಲ್ಲಿ ಇದ್ದಿದ್ದರೆ ಅವರಿಗೆ ನಾನೇ ಗುಂಡು ಹಾರಿಸುತ್ತಿದ್ದೆ” ಪ್ರಮೋದ್ ಮುತಾಲಿಕ್

ಅಂದಿನ ಪರಿಸ್ಥಿತಿಯಲ್ಲಿ ನಾನೇ ಇದ್ದಿದ್ದರೂ ಗಾಂಧಿಯವರನ್ನು ಹತ್ಯೆ ಮಾಡುವುದು ಅನಿವಾರ್ಯವಾಗುತ್ತಿತ್ತು ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯುತ್ತಿರುವ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜನೆಯ ರಾಮಾಯಣ ಸಮೀಕ್ಷೆ ಉಪನ್ಯಾಸ ಸಪ್ತಾಹದಲ್ಲಿ ಬುಧವಾರ ಪಾಲ್ಗೊಂಡಿದ್ದಮುತಾಲಿಕ್ ಈ ರೀತಿ ಹೇಳಿದ್ದಾರೆ.

“ಗಾಂಧೀಜಿಯವರ ಸತ್ಯ, ಶಾಂತಿ, ಸರಳತೆ, ಅಹಿಂಸೆ ಎಲ್ಲವನ್ನೂ ನಾನೂ ಒಪ್ಪುತ್ತೇನೆ. ಆದರೆ, ಅವರ ಚಿಂತನೆಗಳು ಹಿಂದೂಗಳ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಅಂತಹ ಮಹಾತ್ಮರನ್ನು ಗೋಡ್ಸೆ ಹತ್ಯೆ ಮಾಡಿದ್ದು ಕೂಡ ಅಕ್ಷಮ್ಯ,. ಆದರೆ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡುವುದು ಅನಿವಾರ್ಯವಾಗಿತ್ತು. ಗಾಂಧಿ ಕಾಲದಲ್ಲಿ ಇದ್ದಿದ್ದರೆ ಅವರಿಗೆ ನಾನೇ ಗುಂಡು ಹಾರಿಸುತ್ತಿದ್ದೆ” ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಅಂದು ಗಾಂಧೀಜಿ ಜವಾಹರಲಾಲ್ ನೆಹರು ಹಾಗೂ ಸರ್ದಾರ್‌ ವಲ್ಲಭಭಾಯಿ ಇಬ್ಬರಲ್ಲಿ ಸ್ತ್ರೀಲೋಲ ನೆಹರು ಅವರನ್ನು ಮುನ್ನೆಲೆಗೆ ತಂದಿದ್ದು ಸರಿಯಲ್ಲ. ಇಂತಹ ಹಲವಾರು ಅಸಮ್ಮತ ಸಂಗತಿಗಳು ಗಾಂಧಿಯವರ ಹತ್ಯೆಗೆ ಕಾರಣವಾಯಿತು” ಎಂದು ಕೂಡ ಮುತಾಲಿಕ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top