fbpx
ಸಮಾಚಾರ

ಜೀವ ಬೆದರಿಕೆ- ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಆತ ಮದನ್ ಪಟೇಲ್.

ದೊಮ್ಮಲೂರು ಸಮೀಪದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಟ ಮದನ್ ಪಟೇಲ್ ತಮಗೆ ರಕ್ಷಣೆ ನೀಡುವಂತೆ ಕೋರಿ ಪೊಲಿಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ.

ಬೆಂಗಳೂರಿನ ದೊಮ್ಮಲೂರು ಮುಖ್ಯ ರಸ್ತೆಯ ಸಮೀಪದಲ್ಲಿ ಗೀತಾ ಮಂಜುನಾಥ್ ಎಂಬವರಿಗೆ ಸೇರಿದ್ದ ಬಿಡಿಎ ಸೈಟ್ ಅನ್ನು ನಾನು ಖರೀದಿಸಿದ್ದೆ.. ಖರೀಧಿಸುವಾಗ ಮಗ ನಟ ಮಯೂರ್ ಪಟೇಲ್, ಪತ್ನಿ ರೇಖಾ ಕೂಡ ಇದ್ದರು.. ಆದರೆ ಈಗ ಆ ಜಾಗದಲ್ಲಿ ಮನೆ ಕಟ್ಟಲು ಹೋದರೆ ಜಾಗ ಮಾರಾಟ ಮಾಡಿದವರೇ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂದು ಮದನ್ ಪಟೇಲ್ ಆರೋಪಿಸಿದ್ದಾರೆ.

ಗೀತಾ ಹಾಗೂ ಮಂಜುನಾಥ್ ಅವರು ಬೆದರಿಕೆ ಹಾಕುವುದಷ್ಟೇ ಅಲ್ಲದೆ ಶ್ರೀನಿವಾಸ್, ಇನ್ನಿತರರಿಂದ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಮದನ್ ಪಟೇಲ್, ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಮದುನ್ ಪಟೇಲ್ ಕೋರಮಂಗಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top