fbpx
ಸಮಾಚಾರ

ದೈತ್ಯ ರಾಕ್ಷಸ ಕುಂಭಕರ್ಣ ಯಾಕೆ ಹೀಗೆ 6 ತಿಂಗಳ ತನಕ ನಿದ್ದೆ ಮಾಡ್ತಿದ್ದ ? ನಿಮಗೆ ಗೊತ್ತಿಲ್ಲದೇ ಇರೋ 8 ವಿಷಯ ತಿಳ್ಕೊಳ್ಳಿ

ದೈತ್ಯ ರಾಕ್ಷಸ ಕುಂಭಕರ್ಣನ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರೋ 8 ನಿಜ ಸಂಗತಿಗಳನ್ನು ತಿಳಿಯಿರಿ.

ನಾವು ನಮ್ಮ ಮನೆಗಳಲ್ಲಿ ಆಗಾಗ ನಮ್ಮ ತಂದೆ ತಾಯಿ ಅಥವಾ ಮನೆಯಲ್ಲಿರುವ ದೊಡ್ಡವರು ನಮಗೆ ಬಯ್ಯುತ್ತಿರುತ್ತಾರೆ ಏನು ಕುಂಭಕರ್ಣನ ತರ ಯಾವಾಗ್ಲೂ ಬರೀ ನಿದ್ದೇನೆ ಮಾಡ್ತಿಯ ಎಷ್ಟೊತ್ತು ಮಲಗೋದು ಅಂತ.ಹೀಗೆ ನಮಗೆ ಯಾಕೆ ಬಯ್ಯುತ್ತಿದ್ದರು ಅಂದ್ರೆ ಕುಂಭಕರ್ಣ 6 ತಿಂಗಳು ಮಲಗಿ ನಿದ್ರೆ ಮಾಡುತ್ತಿದ್ದ ಮತ್ತು ಒಂದು ದಿನ ಎಚ್ಚರ ಇರುತ್ತಿದ್ದ ಆದರೆ ನಮಗೆ ಒಂದು ದಿನಕ್ಕೆ ಸರಿಯಾಗಿ ನಿದ್ರೆ ಮಾಡಲು 6 ಗಂಟೆ ಕೂಡ ಸಮಯ ಕೂಡ ಸಿಕ್ತಾಯಿಲ್ಲ.
ಆದರೆ ನಮಗೆ ಕುಂಭಕರ್ಣನ ಬಗ್ಗೆ ಇದೊಂದೇ ವಿಷಯ ಗೊತ್ತಿರೋದು ಮತ್ತು ಕುಂಭಕರ್ಣ ಯಾಕೆ ಹೀಗೆ 6 ತಿಂಗಳ ತನಕ ನಿದ್ದೆ ಮಾಡ್ತಿದ್ದ ? ಅವನಿಗೆ ಹಸಿವಾಗುವುದಿಲ್ಲವೆ ? ತ್ರೇತಾಯುಗದಲ್ಲಿ ಕುಂಭಕರ್ಣ ರಾವಣನ ತಮ್ಮನಾಗಿ ಜನಿಸಿದ್ದ.ಬನ್ನಿ ಕುಂಭಕರ್ಣನ ಬಗ್ಗೆ ತಿಳಿದುಕೊಳ್ಳೋಣ…

1. ಕುಂಭಕರ್ಣನು ಹೀಗೆ ನಿದ್ರಿಸಲು ಅವನು ವರಗಳನ್ನು ಕೇಳಿದ್ದೆ ಕಾರಣ.

ಕುಂಭಕರ್ಣನು ಒಂಟಿಕಾಲಿನಲ್ಲಿ ನಿಂತು ತಪ್ಪಸ್ಸನ್ನಾಚರಿಸುತ್ತಿದ್ದನು.ಬ್ರಹ್ಮನು ಕುಂಭಕರ್ಣನ ಕಡೆ ಸಾಗಿದಾಗ ದೇವತೆಗಳು ಬ್ರಹ್ಮದೇವ,ಈಗಾಗಲೇ ಕುಂಭಕರ್ಣನು ಅನೇಕ ಋಷಿಮುನಿಗಳನ್ನು ತಿಂದು ಹಾಕಿದ್ದಾನೆ ಆದ್ದರಿಂದ ಅವನಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಕೊಡಬೇಡಿ ಎಂದರು.ಆಗ ಬ್ರಹ್ಮದೇವನು ಸರಸ್ವತಿ ದೇವಿಗೆ ದೇವತೆಗಳ ಇಚ್ಛೆಯನ್ನು ಈಡೇರಿಸುವಂತೆ ಹೇಳಿದನು.

ಕುಂಭಕರ್ಣನು ವರ ಕೇಳುವ ಸಮಯದಲ್ಲಿ ಸರಸ್ವತಿಯು ಅವನಲ್ಲಿ ಸೇರಿ ಬುದ್ಧಿಯನ್ನು ಬಡಲಾಯಿಸಿದಳು.ಆಗ ಕುಂಭಕರ್ಣನು ‘ಇಂದ್ರಾಸನ’ ಕೇಳುವ ಬದಲು ‘ನಿದ್ರಾಸನ’ ಕೇಳಿದನು.ಆಗ ಬ್ರಹ್ಮನು ಅನುಗ್ರಹಿಸಿ ಹೋದನು.ಹೀಗೆ ಕುಂಭಕರ್ಣನು ಆರು ತಿಂಗಳು ನಿದ್ದೆ ಹಾಗೂ ಒಂದು ದಿನ ಎಚ್ಚರವಿರುವ ವಿಚಿತ್ರ ವರವನ್ನು ಪಡೆದನು.ಆದರೆ ಮುಂದೆ ತಾನೇನು ವರ ಪಡೆದೆ ಎಂದು ಅಲೋಚಿಸಿದಾಗ ದೇವತೆಗಳಿಂದ ತನಗೆ ಮೋಸವಾಯಿತೆಂದು ತಿಳಿದನು.

2. ಇವನ ಶಕ್ತಿಯನ್ನು ಕಂಡು, ದೇವರಾಜ ಇಂದ್ರನಿಗೂ ಕೂಡ ಅಸೂಯೇ.

ಇಡೀ ಇಂದ್ರಲೋಕದಲ್ಲೇ ಕುಂಬಕರ್ಣನನ್ನು ಸೋಲಿಸುವವರು ಯಾರೂ ಇರಲಿಲ್ಲ. ಆದ್ದರಿಂದ ಇವನ ಶಕ್ತಿ, ಬಲವನ್ನು ಕಂಡು ಇಂದ್ರನೂ ಕೂಡ ಅಸೂಯೇ ಪಡುತ್ತಿದ್ದನು.ಕುಂಭಕರ್ಣನ ಶಕ್ತಿಯೂ ಇಡೀ ವಿಶ್ವದಲ್ಲಿಯೇ ಪ್ರಬಲವಾದದ್ದು ಎಂದು ಪರಿಗಣಿಸಲಾಗಿತ್ತು.

3. ಕುಂಭಕರ್ಣನು ಇಡೀ ವಿಶ್ವವನ್ನೇ ತಿಂದು ಬಿಡುತ್ತಿದ್ದನು.

ಕುಂಭಕರ್ಣನು ತ್ತಿನ್ನುವುದರಲ್ಲಿ ಬೃಹತ್ ಸಾಮರ್ಥ್ಯವನ್ನು ಹೊಂದಿದ್ದನು.ಅವನು ಎಚ್ಚರವಿದ್ದ ಆ ಒಂದು ದಿನ ಎಲ್ಲವನ್ನೂ ತಿಂದು ಬಿಡುತ್ತಿದ್ದ.ಬ್ರಹ್ಮನು ವರ ಕೊಡುವುದಕ್ಕಿಂತ ಮುಂಚೆ ಕೂಡ ಟನ್ ಗಟ್ಟಲೆ ತ್ತಿನ್ನುತ್ತಿದ್ದ.ಅದಕ್ಕಾಗಿ ಬ್ರಹ್ಮದೇವನು ಸರಸ್ವತಿ ದೇವಿಯು ಸೇರಿ ಇವನ ಹಸಿವು ಇಡೀ ವಿಶ್ವವನ್ನೇ ತಿಂದು ಮುಗಿಸಿಬಿಡಬಹುದು ಎಂದು ಈ ರೀತಿ ಮಾಡಿದರು.

4. ಕುಂಭಕರ್ಣನು ತತ್ವಶಾಸ್ತ್ರಜ್ಞ ನಾಗಿದ್ದನು.

ನಾರದ ಮುನಿಗಳು ಕುಂಭಕರ್ಣನಿಗೆ ತತ್ವಶಾಸ್ತ್ರಜ್ಞವನ್ನು ಬೋಧಿಸಿದ್ದರು.ಯಾಕೆಂದರೆ ಕುಂಭಕರ್ಣನು ಹಿಂಸಿಸುವುದು ಮತ್ತು ಪಾಪವನ್ನು ಮಾಡುವುದರಲ್ಲಿ ಯಾವ ಆಸಕ್ತಿಯನ್ನು ತೋರಿಸುತ್ತಿರಲ್ಲಿಲ್ಲ.

5. ರಾವಣನು ಹೋಗುವ ದಾರಿ ಸರಿಯಿಲ್ಲ ಎಂದು ಗೊತ್ತಿದ್ದರೂ ಇವನ ಅಣ್ಣ ರಾವಣನಿಗೋಸ್ಕರ ಯುದ್ಧವನ್ನು ಮಾಡಿದನು.

ಕುಂಭಕರ್ಣನಿಗೆ ಗೊತ್ತಿತ್ತು ರಾಮನ ಜೊತೆ ಯುದ್ದ ಮಾಡುವುದು ನಿರರ್ಥಕವೆಂದು.ಆದರೂ ಕೂಡ ಅವನು ಅವರ ಅಣ್ಣನ ಪರ ನಿಂತು ಅವನ ಪಕ್ಷವನ್ನು ವಹಿಸಿಕೊಳ್ಳುವುದನ್ನು ಬಿಡಲಿಲ್ಲ, ಆದರೆ ವಿಭೀಷಣ ಭಿನ್ನವಾಗಿ ರಾಮನಿಗೆ ಬೆಂಬಲಿಸಿದ.

6. ಯಾರು ಅವನನ್ನು ಎಚ್ಚರ ಗೊಳಿಸುವ ಧೈರ್ಯ ಮಾಡಲಿಲ್ಲ.

ಕುಂಭಕರ್ಣನನ್ನು ನಿದ್ರೆಯಿಂದ ಎಚ್ಚರ ಗೊಳಿಸುವುದೇ ಒಂದು ದೊಡ್ಡ ಮಹತ್ತರ ಕಾರ್ಯವಾಗಿತ್ತು.ಅವನನ್ನು ಯುದ್ಧ ಮಾಡುವ ಸಲುವಾಗಿ ಎಚ್ಚರ ಗೊಳಿಸಲು ಇಡೀ ಸೈನ್ಯವನ್ನೇ ತೆಗೆದುಕೊಂಡರು.ಸೈನ್ಯವು ಶಬ್ದವನ್ನು ಮಾಡಲು ಡೋಲುಗಳನ್ನು ಬಡಿದರು, ಅನೇಕ ಪ್ರಾಣಿಗಳ ಜೊತೆ ಆನೆಯಂತಹ ದೈತ್ಯ ಪ್ರಾಣಿಗಳನ್ನು ಕರೆತಂದರು ಹೀಗೆ ಕುಂಭಕರ್ಣನನ್ನು ನಿದ್ರೆಯಿಂದ ಎಚ್ಚರಗೊಳಿಸಲು ತುಂಬಾ ಕಷ್ಟ ಪಡಬೇಕಾಯಿತು.

7. ಸೀತೆಯನ್ನು ಅಪಹರಿಸಿದಕ್ಕಾಗಿ ಕುಂಭಕರ್ಣನು ರಾವಣನನ್ನು ಟೀಕಿಸಿದನು.

ಕುಂಭಕರ್ಣನು ರಾವಣನಿಗೆ ಹೇಳಿದನು ಜಗತ್ ಜನನಿಯಾದ ಸೀತೆಯನ್ನು ಅಪಹರಿಸಿರುವುದು ಸಂತೋಷ ಪಡುವಂತಹ ವಿಷಯವಲ್ಲ.ಸೀತೆಯನ್ನು ರಾಮನಿಗೆ ಒಪ್ಪಿಸಿ ನಿನ್ನ ತಪ್ಪುಗಳನ್ನು ಕುರಿತು ರಾಮನ ಬಳಿ ಹೋಗಿ ಕ್ಷಮೆ ಕೇಳು ಎಂದು ರಾವಣನಿಗೆ ಕುಂಭಕರ್ಣ ಹೇಳಿದ ಆದರೆ ರಾವಣನು ನಿರಾಕರಿಸಿದನು.

8. ಕುಂಭಕರ್ಣನಿಗೆ ಭೀಮ ಎಂಬ ಒಬ್ಬ ಮಗನಿದ್ದ.

ಭೀಮನು ಶಿವನಿಂದ ಮರಣ ಹೊಂದಿದನು.ಶಿವನು ಭೀಮಾಶಂಕರನ ಅವತಾರ ತಾಳಿ ಸ್ವತಃ ಜ್ಯೋತಿರ್ಲಿಂಗವಾಗಿ ಮಾರ್ಪಟ್ಟು ಶಿವಲಿಂಗದ ರೂಪವನ್ನು ಅದೇ ಸ್ಥಳದಲ್ಲಿ ತಾಳಿದನು.ಅದುವೇ ಭೀಮನು ಮರಣ ಹೊಂದಿದ ಸ್ಥಳ. ಅಂದಿನಿಂದ ಜ್ಯೋತಿರ್ಭೀಮೇಶ್ವರ ಎಂಬ ಹೆಸರಿನಿಂದ ಆ ಸ್ಥಳವು ಪ್ರಸಿದ್ಧಿಯನ್ನು ಹೊಂದಿತು.

9. ಕುಂಭಕರ್ಣನನು ರಾಮನಿಂದ ಹತನಾದನು.

ಯುದ್ಧ ಭೂಮಿಯಲ್ಲಿ ಯುದ್ಧ ಮಾಡುವಾಗ ಕುಂಭಕರ್ಣನು ವಾನರ ಸೇನೆಯಲ್ಲಿ ಅನೇಕ ವಾನರರನ್ನು ಸಾಯಿಸಿದ. ಕೊನೆಗೆ ರಾಮನೇ ಕುಂಭಕರ್ಣನನ್ನು ಸಾಯಿಸಿದನು.ಕುಂಭಕರ್ಣನು ಸಾಯುವ ಮುನ್ನ “ ಜೈ ಶ್ರೀ ರಾಮ” ಎಂದು ಉಚ್ಚರಿಸುತ್ತಿದ್ದ ಕೊನೆಗೆ ಅವನಿಗೆ ಮೋಕ್ಷವೂ ಪ್ರಾಪ್ತಿಯಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top