fbpx
ಸಮಾಚಾರ

ಫೇಸ್‍ಬುಕ್ ನಲ್ಲಿ ಸುಧಾಮೂರ್ತಿಗೆ ಅವಮಾನ

ದೇಶದ ಸಾಧಾರಕರ ಪಟ್ಟಿಯಲ್ಲಿ ನಿಸ್ಸಂದೇಹವಾಗಿ ಮೊದಲ ಸಾಲಿನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ನಿಲ್ಲುತ್ತಾರೆ. ಕೋಟಿಗಟ್ಟಲೆ ಹಣವಿದ್ದರೂ, ಸಮಾಜದಲ್ಲಿ ಒಳ್ಳೆಯ ಹೆಸರಿದ್ದರೂ ಒಂಚೂರು ಆಡಂಭರವಿಲ್ಲದೆ, ಸಮಾಜದ ಏಳಿಗೆಗಾಗಿ ಸರಳವಾಗಿ ಬಾಳುತಿರುವ ಸಾಧಕಿ ಹಾಗೂ ಸಮಾಜ ಸುಧಾರಕಿ ಸುಧಾಮೂರ್ತಿ ಇವರು ಎಲ್ಲರಿಗೂ ಆದರ್ಶ. ಆದರೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಲಾಗಿದೆ.

 

 

ಮಾಜಿ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಹಡಪದ ತನ್ನ ಫೇಸ್‍ಬುಕ್ ಮೂಲಕ ಸುಧಾಮೂರ್ತಿ ಅವರನ್ನು ಅವಮಾನಿಸಿದ್ದಾರೆ. ಮಲ್ಲಿಕಾರ್ಜುನ ಹಡಪದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ `ಸೋಗಲಾಡಿ ಸುಧಾರಕಿ’ ಎಂದು ಸುಧಾಮೂರ್ತಿ ಅವರನ್ನು ಅವಮಾನ ಮಾಡಿದ್ದಾರೆ.

“ಸರ್ಕಾರ ಬಡತನ ಹಾಗು ನಿರುದ್ಯೋಗ ತೊಲಗಿಸಲು ಮುಂದಾದರೆ ಸುಧಾ ಮೂರ್ತಿ ಅಂತ ಸೋಗಲಾಡಿ ಸಮಾಜ ಸುಧಾರಕಿಯರ ಅವಶ್ಯಕತೆ ಇರುವುದಿಲ್ಲ” ಎಂದು ಮಲ್ಲಿಕಾರ್ಜುನ ಹಡಪದ ಪೋಸ್ಟ್ ಮಾಡಿದ್ದಾರೆ. ಸಮಾಜ ಸೇವಕಿ ಸುಧಾಮೂರ್ತಿ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ಮಲ್ಲಿಕಾರ್ಜುನ ಹಡಪದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top