fbpx
ಸಮಾಚಾರ

ಧೋನಿ ಗ್ಲೌಸ್‍ನಲ್ಲಿ ಭಾರತೀಯ ಸೇನಾ ಲಾಂಛನ – ನೆಟ್ಟಿಗರಿಂದ ಮೆಚ್ಚುಗೆ.

ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಎಂಎಸ್ ಧೋನಿ ವಿಶೇಷ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್ ಮೇಲೆ ಭಾರತೀಯ ಸೇನೆಯ ಬಲಿದಾನದ ಲೋಗೋ ಅಚ್ಚು ಹಾಕಲಾಗಿತ್ತು. ಪಂದ್ಯದ ಆರಂಭದಿಂದಲೂ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ ಅವರನ್ನು ಸ್ಟಂಪೌಟ್ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

 

 

ವಿಕೆಟ್ ಕೀಪಿಂಗ್ ಗ್ಲೌಸ್‍ನಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಯಾದ ಪ್ಯಾರಾಚೂಟ್ ರೆಜಿಮೆಂಟ್‍ನ ಬಾಣದ ಗುರುತು ಇರುವ ಲಾಂಛನ ಇರುವುದನ್ನು ನೋಡಿದ ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಧೋನಿ ಅವರಿಗೆ ಸೇನೆಯ ಬಗ್ಗೆ ಬಹಳ ಅಭಿಮಾನವಿದ್ದು, ಅವರು 2011 ಪ್ಯಾರಾಚೂಟ್ ರೆಜಿಮೆಂಟ್‍ನ ಸಮವಸ್ತ್ರ ಧರಿಸಿ ಸೇನಾ ನೆಲೆಯಲ್ಲಿ ಸೈನಿಕರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಪ್ಯಾರಾ ಬ್ರಿಗೇಡ್‍ನಲ್ಲಿ ತರಬೇತಿಯನ್ನು ಸಹ ಧೋನಿ ಪಡೆದಿದ್ದಾರೆ. ತಮ್ಮ ಅದ್ಬುತ ಕ್ರಿಕೆಟ್ ಪ್ರದರ್ಶನದಿಂದಲೇ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ ಧೋನಿ ಅಗ್ರಾದಲ್ಲಿ ಕೆಲ ದಿನಗಳ ಕಾಲ ಸೇನಾ ತರಬೇತಿಯಲ್ಲಿ ಕೂಡ ಪಾಲ್ಗೊಂಡಿದ್ದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top