fbpx
ಸಮಾಚಾರ

ಅನಂತ್ ಕುಮಾರ್‌ಗೆ ಇದೊಂದು ಆಸೆ ಈಡೇರದೇ ಹಾಗೆ ಉಳಿಯಿತು

ರಾಜ್ಯ ಬಿಜೆಪಿಯ ಹಿರಿಯ ತಲೆಯಾಳು, ಸತತ ಆರು ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ ಅನಂತ್ ಕುಮಾರ್ ಅಕಾಲಿಕವಾಗಿ ಮರೆಯಾಗ ತಿಂಗಳುಗಳು ಕಳೆಯುತ್ತಾ ಬಂದಿವೆ. ಒಂದಷ್ಟು ಕಾಲ ಅವರ ಅಗಲಿಕೆಯಿಂದ ಶಾಕ್ ಆಗಿದ್ದವರು, ಕಂಬನಿಗರೆದಿದ್ದವರೆಲ್ಲ ಮತ್ತೆ ತಂತಮ್ಮ ಬದುಕಿನ ಜಂಜಡಗಳಲ್ಲಿ ಕಳೆದು ಹೋಗಿದ್ದಾರೆ. ಆದರೆ ಅನಂತ ಕುಮಾರ್ ಅವರಿಗೆ ಇದ್ದ ಆಸೆ ಕೊನೆಗೂ ಈಡೇರದೆ ಹಾಗೆ ಉಳಿದುಕೊಂಡಿದೆ.

ಈಡೇರಲಿಲ್ಲ ಈ ಆಸೆ:
ತಮ್ಮ ಇಳಿ ವಯಸ್ಸಿನಲ್ಲಿ ಹುಟ್ಟೂರಾದ ದೇವನಹಳ್ಳಿ ಸಮೀಪದ ಹೆಗ್ಗನಹಳ್ಳಿಯಲ್ಲಿ ಕಾಲ ಕಳೆಯಬೇಕೆಂಬ ಅನಂತಕುಮಾರ್ ಅವರ ಆಸೆಯಾಗಿತ್ತು,, ಆದರೆ ಆ ಆಸೆ ಈಡೇರದೇ ಅನಂತ್ ಕುಮಾರ್ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಇಳಿ ವಯಸ್ಸು ಬರುವ ಮುನ್ನವೇ ಚಿಕ್ಕ ವಯಸ್ಸಿಗೆ ನಿಧರಾಗಿ ಕಾಲನ ಕರೆಗೆ ಓಗೊಟ್ಟಿದ್ದಾರೆ,.

ಅನಂತಕುಮಾರ್ ಅವರಿಗೆ ತಾವು ಹುಟ್ಟಿ , ಬೆಳೆದ ಊರು ಮತ್ತು ತಮ್ಮ ಹಳೆಯ ಮನೆಯ ಬಗ್ಗೆ ಅಪಾರ ಅಭಿಮಾನವಿತ್ತು. ಹೀಗಾಗಿ ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಹುಟ್ಟೂರಲ್ಲೇ ನೆಲೆಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಅವರ ಆಸೆ ಪೂರೈಕೆಗೂ ಮುನ್ನವೇ ಅನಂತಕುಮಾರ್ ಇಹಲೋಕ ಯಾತ್ರೆ ಮುಗಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top