fbpx
ಸಮಾಚಾರ

ಕನ್ನಡ ಕಲಿಯದ ನಿರ್ಮಲ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಬೇಕೇ?

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಕನ್ನಡಿಗ ಪ್ರತಿಷ್ಠಾನ ಈ ಟ್ವಿಟರ್ ಟ್ರೆಂಡ್ ಆರಂಭಿಸಿದ್ದು #manegehogunirmala ಎಂಬ ಹ್ಯಾಶ್ ಟ್ಯಾಗ್ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಭಿಯಾನಕ್ಕೆ ಕಾರಣ ಏನು?
ನಿರ್ಮಲ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವರಾಗಿರುವವರು. ಆದರೆ ಅವರು ಸದಾ ಕನ್ನಡ ಗೊತ್ತಿಲ್ಲ, ಕನ್ನಡ ಬರೋಲ್ಲ ಎಂದು ಕನ್ನಡದ ನಿರ್ಲಕ್ಷ ಮಾಡುತ್ತಲೇ ಬಂದಿದ್ದಾರೆ . ಅಷ್ಟು ಅಲ್ಲದೆ ಇತ್ತೀಚಿಗೆ ವಿಡಿಯೋವೊಂದು ವೈರಲ್ ಆಗಿದ್ದು ಕನ್ನಡದ ಮಾತನಾಡಿ ಎಂದು ಕೇಳಿದ ಮಹಿಳೆಯರಿಗೆ ‘ಕನ್ನಡಂ…..” ಎಂದು ಹೇಳಿ ಬರೋದಿಲ್ಲ ಎಂದು ಕೈ ಸನ್ನೆ ಮಾಡಿದ್ದಾರೆ.. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

 

 

 

ಅಷ್ಟೇ ಅಲ್ಲದೆ ನಿರ್ಮಲ ಸೀತಾರಾಮನ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಿಂದಿ ಹೇರಿಕೆ ವಿಚಾರವಾಗಿ ತಮಿಳು ಭಾಷೆಯಲ್ಲಿ ಕೆಲವೊಂದು ವಿಷಯಗಳನ್ನು ಟ್ವೀಟ್ ಮಾಡಿದ್ದಾರೆ. ಆದರೆ ಎಂದೂ ಕನ್ನಡದಲ್ಲಿ ಟ್ವೀಟ್ ಮಾಡುವುದಿಲ್ಲ. ಹಾಗಾಗಲಿ ಕರ್ನಾಟಕದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವ ನಿರ್ಮಲ ವಿರುದ್ಧ ನೆಟ್ಟಿಗರು ಟ್ವಿಟ್ಟರ್ ಅಭಿಯಾನ ನಡೆಸುತ್ತಿದ್ದಾರೆ.

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top