fbpx
ಸಮಾಚಾರ

ವಿಶ್ವಕಪ್ 2019ನಲ್ಲಿ ಭಾರತದ ಮೊದಲ ಪಂದ್ಯ ಇಷ್ಟೊಂದು ತಡವಾಗಿದ್ದೇಕೆ?

2019ರ ವಿಶ್ವಕಪ್‌ನಲ್ಲಿ ಆಡುತ್ತಿರವ 10 ತಂಡಗಳ ಪೈಕಿ ಭಾರತವನ್ನು ಹೊರತುಪಡಿಸಿ ಉಳಿದ 9 ತಂಡಗಳು ಈಗಾಗಲೇ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿವೆ. ಆದರೆ ಟೀಮ್ ಇಂಡಿಯಾ ತನ್ನ ವಿಶ್ವಕಪ್ ಜರ್ನಿಯನ್ನು ಇಂದು ಆರಂಭಿಸುತ್ತಿದೆ.. ಅಷ್ಟಕ್ಕೂ ಭಾರತ ತಂಡ ಇಷ್ಟು ತಡವಾಗಿ ವಿಶ್ವಕಪ್ ಆಡಲು ಕಾರಣವೇನು? ಅಂತೀರಾ? ಮುಂದೆ ಓದಿ..

ವಿಶ್ವಕಪ್‌ ಆರಂಭಗೊಂಡು ಒಂದು ವಾರದ ನಂತರ ತಡವಾಗಿ ಭಾರತ ತನ್ನ ಮೊದಲ ಪಂದ್ಯವನ್ನಾಡುತ್ತಿರುವುದಕ್ಕೆ ನ್ಯಾ.ಲೋಧಾ ಸಮಿತಿ ಶಿಫಾರಸು ಕಾರಣ. ಹೌದು, ಲೋಧಾ ಸಮಿತಿ ಶಿಫಾರಸು ಪ್ರಕಾರ, ಭಾರತ ತಂಡ ಆಡುವ ಎರಡು ಟೂರ್ನಿಗಳ ಮಧ್ಯೆ ಕನಿಷ್ಠ 15 ದಿನಗಳ ಅಂತರವಿರಬೇಕು.

ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳುವ ಸಮಯದಲ್ಲಿ ಐಪಿಎಲ್‌ ಫೈನಲ್‌ ಪಂದ್ಯ ಮೇ 19ರಂದು ನಡೆಯಲಿದೆ ಎಂದು ಹೇಳಲಾಗಿತ್ತು. ಹೀಗಾಗಿ ಭಾರತಕ್ಕೆ ವಿಶ್ವಕಪ್ ಮೊದಲ ಪಂದ್ಯವನ್ನು 15 ದಿನಗಳ ಬಳಿಕ ನಿಗದಿಪಡಿಸಲಾಯಿತು.. ಆದರೆ ಭಾರತದಲ್ಲಿ ಲೋಕಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬದಲಿಸಿದ ಬಿಸಿಸಿಐ, ಮೇ 12ಕ್ಕೆ ಐಪಿಎಲ್‌ ಫೈನಲ್‌ ನಡೆಸಿತು. ಆದರೆ ಒಮ್ಮೆ ಪ್ರಕಟಗೊಂಡಿದ್ದ ವಿಶ್ವಕಪ್ ವೇಳಾಪಟ್ಟಿ ಬದಲಾಗುವಂತಿಲ್ಲ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಸ್ವಲ್ಪ ತಡವಾಗಿ ಕ್ರಿಕೆಟ್ ಆರಂಭಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top