fbpx
ಸಮಾಚಾರ

ಮಂಡ್ಯ ಸಂಸದೆ ಸುಮಲತಾ ಕ್ಷಮೆಯಾಚಿಸಿದ H.ವಿಶ್ವನಾಥ್.

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಎಚ್.ವಿಶ್ವನಾಥ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಇಂದು ನಾನು ನೈತಿಕ ಹೊಣೆಗಾರಿಕೆ ಹೊತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಮಂಡ್ಯ ಸಂಸದೆ ಸುಮಲತಾ ಕ್ಷಮೆಯಾಚಿಸಿದ್ದಾರೆ.

“ಸುಮಲತಾ ಮಂಡ್ಯದ ಹೆಣ್ಣು ಮಗಳು. ಯಾರು ಏನೇ ಮಾತಾಡಿದ್ರೂ ನಾನು ಕ್ಷಮೆ ಕೇಳುತ್ತೇನೆ. ಸುಮಲತಾ ಅವರನ್ನು ಜೆಡಿಎಸ್‍ನ ಕೆಲವರು ನಿಂದಿಸಿದ್ದರು. ಅದಕ್ಕೆ ನಾನು ರಾಜ್ಯಾಧ್ಯಕ್ಷನಾಗಿ ಅಂದೇ ಕ್ಷಮೆ ಕೇಳಿದ್ದೇನೆ. ಅವರನ್ನು ನಿಂದಿಸಿದ್ದು ಮಂಡ್ಯ ಸೋಲಿಗೆ ಕಾರಣ ಎಂದ ಅವರು, ನಾನು ಮಧ್ಯಂತರ ಚುನಾವಣೆಯನ್ನ ನಿರೀಕ್ಷೆ ಮಾಡುತ್ತಿಲ್ಲ ” ಎಂದು ಹೇಳಿದರು.

ಮಂಡ್ಯ ಚುನಾವಣೆ ಸಂದರ್ಭದಲ್ಲಿ ಸಿಎಸ್ ಪುಟ್ಟರಾಜು, ಶಿವರಾಮೇಗೌಡ, ಎಚ್ ಡಿ ರೇವಣ್ಣ ಸೇರಿದಂತೆ ಹಲವಾರು ನಾಯಕರು ಸುಮಲತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದೆಲ್ಲವನ್ನು ಕಷ್ಟಪಟ್ಟು ಸಹಿಸಿಕೊಂಡಿದ್ದ ವಿಶ್ವನಾಥ್, ಈ ಹಿಂದೆ ರಾಯಚೂರಿನಲ್ಲಿ ಒಮ್ಮೆ ಕ್ಷಮೆಯಾಚಿಸಿದ್ದರು. ಇದೀಗ ತಾವು ರಾಜೀನಾಮೆ ನೀಡಿದ ಬಳಿಕವೂ ಕ್ಷಮೆಯಾಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top