fbpx
ಸಮಾಚಾರ

ವೀಕೆಂಡ್ ವಿತ್ ರಮೇಶ್ ಸಾಧಕರ ಖುರ್ಚಿಯಲ್ಲಿ ಸುಮಲತಾ ಅಂಬರೀಶ್.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸ್ಪೂರ್ತಿದಾಯಕ ಷೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಸೀಸನ್ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಪ್ರತಿವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಅತಿಥಿಯಾಗಿ ಕರೆಸಿ ಅವರ ಇಡೀ ಜೀವನ, ಶ್ರಮ ಮತ್ತು ಸಾಧನೆಗಳನ್ನ ಪ್ರೇಕ್ಷಕರ ಮುಂದೆ ತೆರೆದಿಡುವ ಈ ಷೋ ನಲ್ಲಿ ಈ ವಾರ ದೇಶದ ಸಾಧಕರ ಪಟ್ಟಿಯಲ್ಲಿ ಉತ್ತಂಗದ ಸ್ಥಾನದಲ್ಲಿರುವ ಇಬ್ಬರು ಆಗಮಿಸುತ್ತಿದ್ದಾರೆ.

 

 

ಈ ವಾರದ ವೀಕೆಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ಸುಮಲತಾ ಅಂಬರೀಶ್ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕನ್ನಡ, ಮಲೆಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಸುಮಲತಾ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡಿರುವ ಸುಮಲತಾ ಇತ್ತೀಚಿಗೆ ಲೋಕಸ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದಾರೆ.. ವೀಕೆಂಡ್ ಸಂಚಿಕೆಯಲ್ಲಿ ಸುಮಲತಾ ಅವರ ಜೀವನ ತೆರೆದುಕೊಳ್ಳಲಿದೆ.

ಟಿಎಸ್ ನಾಗಾಭರಣ ಕೂಡ ಬರ್ತಾರೆ:
ಸುಮಲತಾ ಅವರ ಸಂಚಿಕೆ ಶನಿವಾರ ಪ್ರಸಾರವಾದರೆ ಭಾನುವಾರದ ಸಂಚಿಕೆಯಲ್ಲಿ ಟಿ ಎಸ್ ನಾಗಾಭರಣ ಸಾಧಕರ ಸೀಟ್ ನಲ್ಲಿ ಕೋರಲಿದ್ದಾರೆ.. ನಿರ್ಮಾಪಕ, ನಿರ್ದೇಶಕ ಮತ್ತು ರಂಗಕರ್ಮಿಯಾಗಿ ಹೆಸರು ಮಾಡಿರುವ ಟಿಎಸ್ ನಾಗಾಭರಣ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಕೂಡ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.

ಅಂದಹಾಗೆ ಈಗಾಗಲೇ ಈ ಸೀಸನ್ ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗಡೆ, ರಾಘವೇಂದ್ರ ರಾಜ್ ಕುಮಾರ್, ಪ್ರೇಮಾ, ಪ್ರಕಾಶ್ ಬೆಳವಾಡಿ, ವಿನಯಾ ಪ್ರಸಾದ್, ಶಶಿಕುಮಾರ್, ಶ್ರೀಮುರುಳಿ, ನಾರಾಯಣ ಮೂರ್ತಿ, ಸುಧಾಮೂರ್ತಿ ಆಗಮಿಸಿ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನುತಂದಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top