fbpx
ಸಮಾಚಾರ

ತಂದೆಯನ್ನು ನೆನೆದು ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ನಟಿ ಶ್ರುತಿ ಮಗಳು.

ಹಿರಿಯ ನಟಿ ಶ್ರುತಿ ಮಗಳು ಗೌರಿ ತಮ್ಮ ತಂದೆ ಮಹೇಂದರ್​ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಭಾವನಾತ್ಮಕವಾಗಿ ಪೋಸ್ಟ್​ ಹಾಕಿದ್ದಾರೆ.ಎರಡು ದಿನಗಳ ಹಿಂದೆ ಗೌರಿ ಅಪ್ಪ ಎಸ್.ಮಹೇಂದರ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ತಂದೆಯನ್ನು ನೆನಪಿಸಿಕೊಂಡು ಅವರ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ.

ಈಗ ಮಗಳು ಗೌರಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಂದೆಯ ಜನ್ಮದಿನದಂದು ಹಾಕಿದ ಪೋಸ್ಟ್​ ಮನಮಿಡಿಯುವಂತಿದೆ. ತಾವು ಚಿಕ್ಕವರಿದ್ದಾಗ ಅಪ್ಪನೊಂದಿಗೆ ಇರುವ ಬ್ಲ್ಯಾಕ್ ಆ್ಯಂಡ್​ ವೈಟ್​ ಫೋಟೊ ಶೇರ್​ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ,..

 

 

“ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀವು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕನಾಗಿದ್ದೀರಿ. ನಿಮ್ಮ ಮೇಲಿನ ಪ್ರೀತಿ ಹಾಗೂ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೊತೆ ಕಾಲ ಕಳೆಯಲು ಕಾಯುತ್ತೀದ್ದೀನಿ” ಎಂದು ಪ್ರೀತಿಯಿಂದ ಬರೆದು ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಶ್ರುತಿ ಅವರು 1998ರಲ್ಲಿ ನಿರ್ದೇಶಕ ಎಸ್.ಮಹೇಂದರ್ ಜೊತೆ ಮದುವೆ ಮಾಡಿಕೊಂಡಿದ್ದರು. ಆದರೆ ಕೌಟುಂಬಿಕ ಕಾರಣದಿಂದಾಗಿ 2009ರಲ್ಲಿ ಶ್ರುತಿ ಮತ್ತು ಎಸ್.ಮಹೇಂದರ್ ಇಬ್ಬರು ಡೈವೋರ್ಸ್ ಪಡೆದುಕೊಂಡಿದ್ದರು. ಅಂದಿನಿಂದ ಮಗಳು ಗೌರಿ ಜೊತೆ ತನ್ನ ತಾಯಿ ಶ್ರುತಿ ಜೊತೆಯೇ ಜೀವನ ನಡೆಸುತ್ತಿದ್ದಾರೆ, ಇತ್ತ ವಿಚ್ಛೇದನದ ಬಳಿಕ ಎಸ್.ಮಹೇಂದರ್ ಅವರು ಮತ್ತೊಂದು ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top