fbpx
ಸಮಾಚಾರ

“ಕೊಹ್ಲಿ ಅಪ್ರಬುದ್ಧ ನಾಯಕ” ಎಂದು ಟೀಕಿಸಿದ್ದ ರಬಾಡಗೆ ತಿರುಗೇಟು ನೀಡಿದ ಕೊಹ್ಲಿ.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಪ್ರಬುದ್ಧ ನಾಯಕ ಎಂದು ಟೀಕಿಸಿದ್ದ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡಾ ಅವರ ಹೇಳಿಕೆಗೆ ಕೊಹ್ಲಿ ತಿರುಗೇಟು ನೀಡಿದ್ದಾರೆ.

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೊದಲ ಪಂದ್ಯಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ನಾಯಕ ಕೊಹ್ಲಿ ಅವರನ್ನು ಪ್ರಶ್ನಿಸಿದಾಗ, “ಈ ಬಗ್ಗೆ ನಾನು ಏನನ್ನು ಹೇಳಲುವುದಿಲ್ಲ. ಈ ಬಗ್ಗೆ ಮಾತನಾಡಬೇಕು ಎಂದಿದ್ದರೆ ಇಬ್ಬರು ಜೊತೆಯಾಗಿ ಎದುರು ಕೂತು ಮಾತನಾಡುತ್ತೇವೆ. ಯಾವುದೇ ಟೀಕೆಗಳಿಗೆ ಮೈದಾನದಲ್ಲೇ ತಕ್ಕ ಉತ್ತರ ನೀಡುತ್ತೇನೆ” ಎಂದು ಹೇಳಿದ್ದಾರೆ.

ರಾಬಾದ ಹೇಳಿದ್ದೇನು?
ಐಪಿಎಲ್ ವೇಳೆ ನಡೆದ ಪ್ರಸಂಗವೊಂದನ್ನು ಉಲ್ಲೇಖಿಸಿ ‘ಕೊಹ್ಲಿ ಅಪ್ರಬುದ್ಧ’ ಎಂದಿದ್ದಾರೆ. ಖಾಸಗಿ ಕ್ರಿಕೆಟ್ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಬಾಡ ”ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಬಳಿಕ ಕೊಹ್ಲಿ ಅಸಮರ್ಪಕ ಪದವೊಂದನ್ನು ಬಳಸಿದರು. ನಾನು ಪ್ರತ್ಯುತ್ತರ ನೀಡಿದೆ. ತಕ್ಷಣವೇ ಅವರು ಸಿಟ್ಟಿಗೆದ್ದರು. ಇದರೊಂದಿಗೆ ತಮ್ಮ ಅಪ್ರಬುದ್ಧತೆಯನ್ನು ಜಗಜ್ಜಾಹೀರುಗೊಳಿಸಿದರು. ಅವರೊಬ್ಬ ಅದ್ಭುತ ಆಟಗಾರರಾಗಿದ್ದರೂ, ಟೀಕೆಯನ್ನು ಸಹಿಸಿಕೊಳ್ಳುವ ವ್ಯವಧಾನ ಅವರಿಗಿಲ್ಲ. ಪಂದ್ಯದುದ್ದಕ್ಕೂ ಅವರು ಅಪ್ರಬುದ್ಧ ವ್ಯಕ್ತಿಯಂತೆ ಕಂಡರು,” ಎಂದು ಟೀಕಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top