fbpx
ಸಮಾಚಾರ

ತಿರುಪತಿ ತಿಮ್ಮಪ್ಪನ ಲಡ್ಡು ಬಗ್ಗೆ ನಿಮಗೆ ಗೊತ್ತಿರದ ಕೆಲವು ಇಂಟರೆಸ್ಟಿಂಗ್ ಸಂಗತಿಗಳು.

ತಿರುಪತಿ ‘ಲಡ್ಡು’ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್ ಸಂಗತಿಗಳು.

ಈ ಲಡ್ಡುವನ್ನು ಸ್ವೀಕರಿಸದೆ ತಿರುಪತಿ ದೇವಸ್ಥಾನ ತೀರ್ಥಯತ್ರೆ ಸಂಪೂರ್ಣಗೊಳ್ಳುವುದಿಲ್ಲ. ತುಪ್ಪ ಮತ್ತು ಏಲಕ್ಕಿ ಆಸ್ವಾದ ಹೊಂದಿರುವ ಈ ಲಡ್ಡು ವಿಶ್ವಪ್ರಸಿದ್ಧ.ಈ ತಿರುಪತಿ ಲಡ್ಡುವಿನ ಬಗ್ಗೆ ನಿಮಗೆ ತಿಳಿಯದೆ ಇರುವ ಅನೇಕ ಇಂಟರೆಸ್ಟಿಂಗ್ ಸಂಗತಿಗಳನ್ನು ನಾವು ಹೇಳ್ತಿವಿ ಕೇಳಿ.

 

1.ಲಡ್ಡುಗೆ ಪೇಟೆಂಟ್:

ತಿರುಪತಿಯ ಈ ಲಾಡುಗಳನ್ನು ತಯಾರಿಸಿ ವಿತರಿಸುವ ಹಕ್ಕುಮಾನ್ಯತೆ ಅಥವಾ ಪೇಟೆಂಟ್ ಅನ್ನು 2009ರಲ್ಲಿ ಪಡೆದುಕೊಂಡಿದೆ. ಅಂದರೆ ಈ ಲಾಡುಗಳನ್ನು ತಯಾರಿಸಿ ವಿತರಿಸುವ ಅಥವಾ ಮಾರುವ ಹಕ್ಕನ್ನು ಪಡೆದುಕೊಂಡಿದೆ.

2.ಲಡ್ಡುವಿನಿಂದ ಕೋಟಿ ಕೋಟಿ ಲಾಭ:

ತಿರುಪತಿಯ ದೇವಸ್ಥಾನದ ಪ್ರತಿ ಲಡ್ಡುವಿಗೆ ಕನಿಷ್ಠ ಬೆಲೆ ಇರಿಸಿದರೂ ಒಟ್ಟಾರೆ ಒಂದು ವರ್ಷದಲ್ಲಿ ತಯಾರಾಗಿ ಮಾರಲ್ಪಡುವ ಲಾಡುಗಳ ಲಾಭ ಒಂದು ದಿನದ ಸರಾಸರಿ ಆದಾಯ 1.11 ಕೋಟಿ ರೂಪಾಯಿಗಳು.ಮಾರಾಟ ಆಗೋ ಲಾಡುನಿಂದ ವರ್ಷಕ್ಕೆ 250 ಕೋಟಿ ಆದಾಯ ಇದೆ!

3.ಲಡ್ಡುವಿಗೆ ಮುನ್ನೂರು ವರ್ಷಗಳ ಇತಿಹಾಸ:

ತಿರುಪತಿ ಲಡ್ಡುವಿಗೆ ಮುನ್ನೂರು ವರ್ಷಗಳ ಇತಿಹಾಸವಿದೆ ಲಡ್ಡುವನ್ನು ಮೊದಲು ಪ್ರಸಾದವಾಗಿ ಕೊಡಲು ಪ್ರಾರಂಭಿಸಿದು ಪ್ರಾರಂಭಸಿದ್ದು ಆಗಸ್ಟ್ 02 1715ರಲ್ಲಿ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

4.ಲಡ್ಡುಗಳನ್ನು ತಯಾರಿಸುವ ಅಡುಗೆ ಮನೆ:

ತಿರುಪತಿ ಲಡ್ಡುಗಳನ್ನು ಪರಂಪರಾಗತವಾಗಿ ತಯಾರಿಸುತ್ತಾ ಬಂದಿರುವ ‘ಅರ್ಚಕ’ ಎಂಬ ಪೂಜಾರಿಗಳೇ ದೇವಸ್ಥಾನದ ಮಗ್ಗುಲಲ್ಲಿಯೇ ‘ಪೋತು’ ಎಂಬ ಬೃಹತ್ ಅಡುಗೆ ಮನೆಯಲ್ಲಿ ತಯಾರಿಸುತ್ತಾರೆ.

5.ಲಾಡನ್ನು ತಯಾರಿಸಲು ಉಪಯೋಗಿಸುವ ಪದಾರ್ಥಗಳು:

 

 

ಪ್ರತಿದಿನ ತಿರುಪತಿಯಲ್ಲಿ ಲಾಡು ತಯಾರಿಸಲು 500KG ಕಡ್ಲೆಹಿಟ್ಟು,1000KG ಸಕ್ಕರೆ,300KG ಏಲಕ್ಕಿ, 500Kg ಕಲ್ಲು ಸಕ್ಕರೆ, 750KG ಒಣದ್ರಾಕ್ಷಿ ಮತ್ತು 500KGತುಪ್ಪದ ಗಳನ್ನೂ ಬಳಸಲಾಗುತ್ತದೆ.

6.ಒಂದಿನಕ್ಕೆ ತಯಾರಾಗೋ ಲಾಡುಗಳು:

ಪ್ರತಿದಿನ ಸುಮಾರು 50,000 ಜನ ತಿರುಪತಿ ದರ್ಶನಕ್ಕೆ ಬರ್ತಾರೆ.ದಿನಕ್ಕೆ 150,000 ಲಾಡು ಮಾಡಿ ವಿತರಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಒಂದು ಲಾಡು ಉಚಿತವಾಗಿ ಕೊಡುತ್ತಾರೆ ಜೊತೆಗೆ 2 ಲಾಡುಗಳನ್ನು ದುಡ್ಡು ಕೊಟ್ಟು ತೆಗೆದುಕೊಳ್ಳಬಹುದು. ಮತ್ತೊಂದು ವಿಶೇಷವೆಂದರೆ ತಿರುಪತಿಯಲ್ಲಿ ಕೊಡುವ ಲಡ್ಡುಗಳೆಲ್ಲವೂ ಒಂದೇ ಆಕಾರದಲ್ಲಿರುತ್ತವೆ ಮತ್ತು ಒಂದೇ ತೂಕದಲ್ಲಿರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top