fbpx
ಸಮಾಚಾರ

ಪೈಲ್ವಾನ್ ಪೋಸ್ಟರ್ ಲಾಂಚ್ ಮಾಡಲಿದ್ದಾರೆ ಈ ಐವರು ಸೂಪರ್ ಸ್ಟಾರ್‌ಗಳು.

ಕಿಚ್ಚ ಸುದೀಪ್ ಅವರ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿಯುವ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವ ಚಿತ್ರದ ಮೇಕಿಂಗ್ ಸ್ಟಿಲ್ಲುಗಳೇ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

 

 

ಪೈಲ್ವಾನ್ ಅಖಾಡದಲ್ಲಿ ತೊಡೆ ತಟ್ಟಿರೋ ಟೀಸರ್ ಈಗಾಗಲೇ ದೊಡ್ಡ ಮಟ್ಟದದಲ್ಲಿ ಸಂಚಲನ ಸೃಷ್ಟಿ ಮಾಡಿದೆ . ಹಾಗೆಯೇ ಚಿತ್ರದಲ್ಲಿ ಕಿಚ್ಚನ ಇನ್ನೊಂದು ಶೇಡ್ ಪಾತ್ರ ಅಂದ್ರೆ ಅದು ಬಾಕ್ಸರ್ ಪಾತ್ರ . ಈಗ ಬಾಕ್ಸರ್ ಪಾತ್ರದ ಖಡಕ್ ಪೋಸ್ಟರ್ ಲುಕ್ ರಿಲೀಸ್ ಮಾಡಲಿದ್ದಾರೆ. ಇಂದು (4-06-19) ಸಂಜೆ 4 ಗಂಟೆಗೆ ಈ ಪೋಸ್ಟರ್ ರಿಲೀಸ್ ಆಗಲಿದೆ. ವಿಶೇಷ ಅಂದ್ರೆ ಈ ಪೋಸ್ಟರ್ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಸೂಪರ್ ಸ್ಟಾರ್ ಗಳಿಂದ ಪೋಸ್ಟರ್ ರಿಲೀಸ್:
ಈ ಪೋಸ್ಟರ್ ಅನ್ನು ಐದು ಸೂಪರ್ ಸ್ಟಾರ್ ಗಳು ರಿಲೀಸ್ ಮಾಡಲಿದ್ದು ಕನ್ನಡದಲ್ಲಿ ಸುದೀಪ್. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮಿಳಿನಲ್ಲಿ ವಿಜಯ್ ಸೇತುಪತಿ, ಮಲೆಯಾಳಂನಲ್ಲಿ ಮೋಹನ್ ಲಾಲ್, ಹಿಂದಿಯಲ್ಲಿ ಸುನೀಲ್ ಶೆಟ್ಟಿ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ.

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top