fbpx
ಸಮಾಚಾರ

“ಸೋತ ಜಾಗದಲ್ಲೇ ಎದ್ದು ಬರುತ್ತೇನೆ” ನಿಖಿಲ್ ಕುಮಾರ್ ವಿಡಿಯೋ ವೈರಲ್​.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದರು. ಈ ಸೋಲಿನ ಬಳಿಕ ನಿಖಿಲ್​ ಮತ್ತೆ ಚಿತ್ರರಂಗದಲ್ಲಿ ಬ್ಯುಸಿ ಆಗುತ್ತಾರಾ? ಅಥವಾ ಸಕ್ರೀಯ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ತಾರ? ಎನ್ನುವ ಪ್ರಶ್ನೆ ಮೂಡಿತ್ತು. ಈಗ ಈ ಎಲ್ಲಾ ಪ್ರಶ್ನೆಗಳಿಗೆ ನಿಖಿಲ್​ ಉತ್ತರಿಸಿದ್ದಾರೆ.

‘ಚುನಾವಣೆಯ ಸೋಲಿನಿಂದ ಉತ್ತಮ ಪಾಠ ಕಲಿತಿರುವೆ. ಮುಂದಿನ ದಿನಗಳಲ್ಲಿ ನನ್ನ ತಾತ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಹೋಬಳಿಯ ಬುಳ್ಳಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಕಾರ್ಯಕರ್ತರು, ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ನಿಖಿಲ್ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

“ನಾನು ಮೊದಲಿಗಿಂತ ತುಂಬಾ ಬದಲಾಗಿದ್ದೇನೆ. ನಾವು ಜನರನ್ನು ಮುಖತಃ ಭೇಟಿ ಮಾಡಿದರೆ ಮಾತ್ರ ವಾಸ್ತವ ಏನು ಎಂಬುದು ಗೊತ್ತಾಗುತ್ತದೆ. 8 ತಾಲ್ಲೂಕುಗಳನ್ನು 45-50 ದಿನ ಸುತ್ತಿದ ನಂತರ ಈ ವಿಚಾರ ನನಗೆ ಗೊತ್ತಾಗಿದೆ. ಬೇರೆ ಜಿಲ್ಲೆಗಳನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗ ಕಾರ್ಯಕರ್ತನಾಗಿ ಆ ಕೆಲಸ ಮಾಡುತ್ತೇನೆ,” ಎಂದಿದ್ದಾರೆ.

 

 

ವಿಡಿಯೋದಲ್ಲಿ ಇರುವುದೇನು?
ಇಂದು ಆಗಿರುವ ಬದಲಾಣೆಗೆ ನಾವು ಗ್ರೌಂಡ್‍ನಲ್ಲಿ ಇಳಿದು ಜನರನ್ನು ಭೇಟಿಯಾದಗಲೇ ವಾಸ್ತವ ಅಂಶ ಅರ್ಥವಾಗಿದೆ. ಎಂಟು ತಾಲೂಕಗಳನ್ನು 45 ದಿನಗಳ ಕಾಲ ಸುತ್ತಿದ್ದೇನೆ. ಅಲ್ಲಿನ ಜನರ ಬಗ್ಗೆ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಬೇರೆ ಜಿಲ್ಲೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.

ನಾನು ತಕ್ಷಣವೇ ಮಂಡ್ಯದಲ್ಲಿ ಒಂದು ತೋಟ ಮಾಡಿ ಮನೆ ಕಟ್ಟುತ್ತೇನೆ. ಮನೆ ಕಟ್ಟೋವರೆಗೂ ಕಾಯುತ್ತಾ ಕುಳಿತುಕೊಳ್ಳಲ್ಲ. ಶೆಡ್ ಹಾಕಿಕೊಂಡು ವಾಸ ಮಾಡುತ್ತೇನೆ. ನಾನು ಹಿಂದೆ ಇದ್ದಿದ್ದಕ್ಕೂ, ಈಗ ಇರೋದಕ್ಕೂ ವ್ಯತ್ಯಾಸವಿದೆ. ಇಂದು ಮಂಡ್ಯದಲ್ಲಿ ಸೋಲು ಕಂಡಿದ್ದೇನೆ. ಎಲ್ಲೋ ಒಂದು ಕಡೆ ಜನರಿಗೆ ಬೇಸರವಾಗಿದೆ ಎಂದು ನಿಖಿಲ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top