fbpx
ಸಮಾಚಾರ

ಕನ್ನಡಿಗರ ಪರವಾಗಿ #IBPSಮೋಸ ಹೋರಾಟ ಮುಂದುವರಿಸಿದ ಜಿಸಿಸಿ.

IBPS ಮೋಸದ ಬಗ್ಗೆ ರಾಜ್ಯ ಸಭಾ ಸದಸ್ಯೆ ಜಿಸಿ ಚಂದ್ರಶೇಖರ್ ಮತ್ತೊಮ್ಮೆ ಕನ್ನಡಿಗರ ಪರವಾಗಿ ಬ್ಯಾಟ್ ಬೀಸಿದ್ದಾರೆ.. ಈ ಹಿಂದೆ ಸಂಸತ್ ನಲ್ಲಿ IBPS ವಿಚಾರವಾಗಿ ಧ್ವನಿಯೆತ್ತಿ ಕನ್ನಡಿಗರ ಹೋರಾಟಕ್ಕೆ ಕೈ ಜೋಡಿಸಿದ್ದ ಜಿಸಿ ಚಂದ್ರಶೇಖರ್ ಅಂದು ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರಿಗೆ ಈ ವಿಚಾರವಾಗಿ ಪತ್ರವನ್ನು ಕೂಡ ಬರೆದಿದ್ದರು. ಇದೀಗ ಜಿಸಿಸಿ ಮತ್ತೊಮ್ಮೆ IBPS ವಿಚಾರವಾಗಿ ಧ್ವನಿಯೆತ್ತಿದ್ದಾರೆ.

 

 

ನೂತನ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ನಿರ್ಮಲ ಸೀತಾರಾಮನ್ ಅವರಿಗೆ ಶುಭಹಾರೈಸಿರುವ ಜಿಸಿಸಿ #IBPSಮೋಸ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಚಂದ್ರಶೇಖರ್ “ನಿರ್ಮಲ ಸೀತಾರಾಮನ್ ಅವರೇ ಹಣಕಾಸು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಶುಭಾಶಯಗಳು. ಈ ಪತ್ರದ ಮೂಲಕ #IBPSmosa ನಿಮ್ಮ ಗಮನಕ್ಕೆ. ಪತ್ರದಲ್ಲಿ ಬರೆದ ಹಾಗೆ IBPS ಮೋಸವನ್ನು ಶೀಘ್ರವಾಗಿ ಪರಹರಿಸದಿದ್ದರೆ #StopHindiImposition ಅಂತೆಯೇ ತೀಕ್ಷ್ಣವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಬಹುದು.” ಎಂದು ಹೇಳಿದ್ದಾರೆ.

ಟ್ವೀಟ್ ಜೊತೆಗೆ ತಾವು ಈ ಹಿಂದೆ IBPS ವಿಚಾರವಾಗಿ ಬರೆದಿದ್ದ ಪತ್ರವನ್ನು ಕೂಡ ಜಿಸಿಸಿ ಶೇರ್ ಮಾಡಿದ್ದಾರೆ.. ಅಂದಹಾಗೆ ಕೇಂದ್ರ ನೂತನ ಶಿಕ್ಷಣ ನೀತಿಯ ವಿರುದ್ಧ ದಕ್ಷಿಣ ರಾಜ್ಯಗಳಲ್ಲಿ #StopHindiImposition ಎಂಬ ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತವಾಗಿತ್ತು.

ಏನಿದು ಐಬಿಪಿಎಸ್ ವಿವಾದ?
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ಸೆಲೆಕ್ಷನ್ ನಡೆಸಿದ ಪರೀಕ್ಷೆಯಲ್ಲಿ ಹೊರ ರಾಜ್ಯದ ಶೇ 85ರಿಂದ 100ರಷ್ಟು ಅಭ್ಯರ್ಥಿಗಳು ನೇಮಕಗೊಳ್ಳುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಶೇ 20ರಷ್ಟು ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆ ಆಗುತ್ತಿಲ್ಲ,, ಜೊತೆಗೆ ಮೊದಲು ಇದ್ದ ನಿಯಮವನ್ನು ತಿದ್ದುಪಡಿ ಮಾಡಿ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು 2014ರಲ್ಲಿ ಜಾರಿಗೊಳಿಸಲಾಗಿದೆ..

ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕೆಂಬ ಕುರಿತಂತೆ ಕರ್ನಾಟಕದಾದ್ಯಂತ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದು ವರ್ಷಗಳೇ ಕಳೆದಿವೆ.ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top