fbpx
ಸಮಾಚಾರ

ಹುಟ್ಟುಹಬ್ಬಕ್ಕೆ ಡಬಲ್ ಸಿಹಿ ಸುದ್ದಿ ಕೊಟ್ಟ ರಕ್ಷಿತ್ ಶೆಟ್ಟಿ.

ಬಿಡುವಿಲ್ಲದ ಕೆಲಸಗಳ ಕಾರಣದಿಂದಾಗಿ ಸೋಷಿಯಲ್‌ ಮೀಡಿಯಾಗಳಿಂದ ದೂರವಿದ್ದ ನಟ ರಕ್ಷಿತ್‌ ಶೆಟ್ಟಿ, ಈಗ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಬರುತ್ತಿದ್ದಾರೆ. ಯಾವುದೇ ಮಾಹಿತಿ ಇರಲಿ, ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿರುತ್ತಿದ್ದ ರಕ್ಷಿತ್‌ಶೆಟ್ಟಿ, ಇದ್ದಕ್ಕಿದ್ದಂತೆಯೇ ಅವರು ಅದರಿಂದ ಹೊರಬಂದಿದ್ದು, ಅವರ ಅಪಾರ ಅಭಿಮಾನಿಗಳಿಗಂತೂ ಸಾಕಷ್ಟು ಬೇಸರವಾಗಿತ್ತು. ಅದೆಲ್ಲವನ್ನೂ ಗಮನಿಸಿದ ರಕ್ಷಿತ್‌ಶೆಟ್ಟಿ ಈಗ ಸೋಶಿಯಲ್‌ ಮೀಡಿಯಾಗಳಲ್ಲಿ ಪುನಃ ಸಕ್ರಿಯರಾಗುತ್ತಿದ್ದಾರೆ. ಅದೇ ಈ ಹೊತ್ತಿನ ವಿಶೇಷ.

ಸಾಮಾಜಿಕ ಜಾಲತಾಣಕ್ಕೆ ಹಿಂತಿರುವಂತೆ ರಕ್ಷಿತ್ ಅಭಿಮಾನಿಗಳು ಅವರಲ್ಲಿ ಕೇಳಿಕೊಳ್ಳುತ್ತಿದ್ದರು. ಇದೇ ಜೂನ್ 6ರಂದು ರಕ್ಷಿತ್ ತಮ್ಮ ಹುಟ್ಟುಹಬ್ಬ ಇದ್ದು, ಇದೇ ದಿನ ಸಾಮಾಜಿಕ ಜಾಲತಾಣಕ್ಕೆ ರೀ-ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ. . ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಗಳಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಸಕ್ರಿಯರಾಗಲಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ನಟ ವಿಶೇಷ ಉಡುಗೊರೆ ನೀಡಲಿದ್ದಾರೆ.

 

 

ಬರ್ತಡೇಯಂದೇ ಟೀಸರ್:
. ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಗಳಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಸಕ್ರಿಯರಾಗಲಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ನಟ ವಿಶೇಷ ಉಡುಗೊರೆ ನೀಡಲಿದ್ದಾರೆ. ಈಗಾಗಲೇ, ಚಿತ್ರದ ಮೊದಲ ಟೀಸರ್ ದೊಡ್ಡ ಹಿಟ್ ಆಗಿದೆ. ಆ ಟೀಸರ್ ಬಂದು ಅನೇಕ ತಿಂಗಳುಗಳು ಕಳೆದಿದ್ದು, ಮತ್ತೆ ಅಭಿಮಾನಿಗಳ ಮುಂದೆ ರಕ್ಷಿತ್ ಬರುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top