fbpx
ಸಮಾಚಾರ

ದೇಹ ದೊಡ್ಡದಾದರೆ ಏನು ಪ್ರಯೋಜನ ಬುದ್ದಿ ನೆಟ್ಟಗಿರಬೇಕು – ನೀತಿ ಕಥೆ ಬಲಶಾಲಿ ಆನೆ !

ಬಲಶಾಲಿ ಆನೆ.

ಒಂದು ಕಾಡಿನಲ್ಲಿ ಒಂದು ಹತ್ತಿಯ ಮರದ ಕೆಳಗೆ ಗುಬ್ಬಿ ದಂಪತಿಗಳು ವಾಸಿಸುತ್ತಿದ್ದರು. ಮರದ ಮೇಲೆ ಸೊಗಸಾದ ಗೂಡು ಕಟ್ಟಿಕೊಂಡು ಅವು ಸಂತೋಷದಿಂದ ಇದ್ದವು.ಕೆಲವು ಕಾಲದ ನಂತರ ಹೆಣ್ಣು ಗುಬ್ಬಿ ಗೂಡಿನೊಳಗೆ ಮೊಟ್ಟೆ ಇಟ್ಟಿತ್ತು.ಗುಬ್ಬಿ ದಂಪತಿಗಳಿಗೆ ಬಹಳ ಸಂತೋಷವಾಯಿತು.ಅವು ಕಾತುರದಿಂದ ತಮ್ಮ ಮರಿಗಳಿಗೆ ಕಾಯುತ್ತಿದ್ದವು.

 

ಒಂದು ದಿನ ಒಂದು ಬಲಶಾಲಿ ಆನೆ ಸುತ್ತಾಡುತ್ತಾ ಅತ್ತಿಯ ಮರದ ಹತ್ತಿರ ಬಂತು.ಆನೆಗೆ ಅತ್ತಿಯ ಮರದ ಎಲೆಗಳೆಂದರೆ ಬಹಳ ಇಷ್ಟ ಆದ್ದರಿಂದ ಅದು ಮರದ ಕೊಂಬೆಯನ್ನು ಉರುಳಿಸಲು ತನ್ನ ಸೊಂಡಿಲನ್ನು ಎತ್ತಿತ್ತು.

ಗುಬ್ಬಿಗಳು ಮರದ ಕೊಂಬೆಯನ್ನು ಬೀಳಿಸಲು ಬಂದ ಆನೆಯನ್ನು ನೋಡಿ ಜೋರಾಗಿ ಕಿರುಚಿದವು.
ಗುಬ್ಬಿ ದಂಪತಿಗಳು- ಓ,ಬಲಶಾಲಿ ಆನೆ ನಿಲ್ಲು,ದಯವಿಟ್ಟು ಕೊಂಬೆಯನ್ನು ಕೀಳಬೇಡ. ನಮ್ಮ ಗೂಡು ಈ ಕೊಂಬೆಯ ಮೇಲಿದೆ ಮತ್ತು ಗೂಡಿನಲ್ಲಿ ಮೊಟ್ಟೆಗಳಿವೆ.ನಾವು ನಮ್ಮ ಮರಿಗಳು ಹೊರಬರುವುದನ್ನು ಆಸೆಯಿಂದ ಕಾಯುತ್ತಿದ್ದೇವೆ. ನೀನು ಕೊಂಬೆಯನ್ನು ಕಿತ್ತರೆ ನಮ್ಮ ಗೂಡು ಕೊಂಬೆಯಲ್ಲಿಯೇ ಇರುವುದರಿಂದ ಮೊಟ್ಟೆಗಳು ನಾಶವಾಗುತ್ತವೆ.ಕೆಳಗೆ ಬಿದ್ದು ಹೊಡೆದು ಹೋಗುತ್ತವೆ ಎಂದು ಗುಬ್ಬಿಗಳು ಹೇಳಿದವು.

 

 

ಆದರೂ ಸಹ ದುರಾಹಂಕಾರಿ ಆನೆ ಗುಬ್ಬಿಯ ಮಾತಿಗೆ ಬೆಲೆ ಕೊಡಲಿಲ್ಲ ಮತ್ತು ಹೀಗೆ ಹೇಳಿತು ನಿಮ್ಮ ಗೂಡಿಗೆ ಏನಾಗುತ್ತದೆ ಎಂಬುದು ನನಗೆ ಬೇಕಿಲ್ಲ.ನನಗೆ ಆಹಾರ ಬೇಕು ಅಷ್ಟೇ,ಅದು ಒಂದು ದೊಡ್ಡ ಕೊಂಬೆಯನ್ನು ಕೆಡವಿತು.ನಿರೀಕ್ಷೆಯಂತೆ ಗೂಡು ಕಳಗೆ ಬಿದ್ದು ಮೊಟ್ಟೆಗಳು ಹೊಡೆದು ಹೋದವು.ಗುಬ್ಬಿಗಳು ಜೋರಾಗಿ ಅತ್ತವು. ಕರುಣೆಯಿಲ್ಲದ ಆನೆ ಎಲೆಗಳನ್ನು ತಿಂದು ಅಲ್ಲಿಂದ ಹೊರಟು ಹೋಯಿತು.

ಗುಬ್ಬಿ ದಂಪತಿಗಳಿಗೆ ಬಹಳ ಕೋಪ ಬಂತು ಮತ್ತು ಆನೆಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿದವು.ದಂಪತಿ ಗುಬ್ಬಿಗಳು ಇತರೆ ಪುಟಾಣಿ ಸ್ನೇಹಿತರಿಂದ ಸಹಾಯ ಕೋರಿದವು.
‘ದುರಾಹಂಕಾರಿ ಆನೆ ನಮ್ಮ ಮೊಟ್ಟೆಗಳನ್ನು ಒಡೆದು ಬಿಟ್ಟಿತು’ ಎನ್ನುತ್ತಾ ಜೋರಾಗಿ ಅತ್ತವು ಕಾಗೆ ದಂಪತಿ,ಕಪ್ಪೆ ಮತ್ತು ಇರುವೆಗಳು ಅವಕ್ಕೆ ಸಮಾಧಾನ ಹೇಳಿದವು ಚಿಂತೆ ಬಿಡಿ ಗೆಳೆಯರೇ ಆ ಉದ್ಧಟ ಆನೆಗೆ ನಾವು ಬಂದು ಬುದ್ದಿ ಕಲಿಸುತ್ತೇವೆ ಎಂದರು .

ಎಲ್ಲರೂ ಒಟ್ಟಾಗಿ ಕುಳಿತು ಆನೆಗೆ ತಕ್ಕ ಪಾಠ ಕಲಿಸಲು ಕಾಗೆ ,ಪುಟ್ಟ ಗೆಳೆಯರು ಎಲ್ಲರೂ ಸೇರಿ ಆನೆಯನ್ನು ಹುಡುಕಿದರು. ಅವರು ಆನೆಯನ್ನು ನೋಡಿದರು ಮತ್ತು ಅದರ ಮೇಲೆ ದಾಳಿ ಮಾಡಲು ಆರಂಭಿಸಿದರು.

 

 

ಇರುವೆ ಆನೆಯ ಕಿವಿಗೆ ಹೋಗಿ ಕಚ್ಚಲು ಪ್ರಾರಂಭಿಸಿತು ಸತತವಾದ ಇರುವೆಯ ಕಡಿತದಿಂದ ಆನೆಗೆ ನೋವು ತಾಳಲಾರದೆ ಪ್ರಜ್ಞೆ ತಪ್ಪಿ ಮೂರ್ಛೆ ಹೋಯಿತು.ಈಗ ದಾಳಿ ಮಾಡು ಎನ್ನುತ್ತಾ ಕಾಗೆ ದಂಪತಿಗಳು ಮರದಿಂದ ಹಾರಿ ಬಂದು,ಕಾಗೆಯು ಆನೆಯ ಕಣ್ಣುಗಳನ್ನು ತನ್ನ ಚೂಪಾದ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಆನೆಯನ್ನು ಕುರುಡು ಮಾಡಿಬಿಟ್ಟವು.

ಆನೆಗೆ ತುಂಬಾ ನೋವಾಗಿ ಜೋರಾಗಿ ಕಿರುಚಿತು.ಈ ಹಠಾತ್ ದಾಳಿಯಿಂದ ಆನೆಗೆ ತೀವ್ರವಾದ ಆಘಾತವಾಯಿತು.ಆದರ ಗಂಟಲು ಒಣಗಿತು ಆದುದರಿಂದ ಅದರ ಕುರುಡು ಕಣ್ಣುಗಳಿಂದಲೇ ಕೊಳದ ಕಡೆಗೆ ನೀರು ಕುಡಿಯಲು ಹೊರಟಿತು.ಕಪ್ಪೆ ದೊಡ್ಡ ಗುಂಡಿಯ ಕಡೆಗೆ ಓಡಿತು ಮತ್ತು ಆನೆ ಆ ಗುಂಡಿಯ ಒಳಗೆ ಬಿದ್ದಿತು.ಅದು ಗುಂಡಿಯಲ್ಲಿ ಬಿದ್ದು ಸತ್ತು ಹೋಯಿತು .ಗುಬ್ಬಿ ದಂಪತಿಗಳು ಬಲಶಾಲಿ ಆನೆಯನ್ನು ಸಾಯಿಸಿದರು.

ನೀತಿ- ಶಕ್ತಿಗಿಂತ ಯುಕ್ತಿ ಮೇಲು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top