fbpx
ಸಮಾಚಾರ

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಕಿ ಭಾಯ್

ರಾಕಿಂಗ್ ಸ್ಟಾರ್ ಯಶ್ ಸೂಟ್ ಬೂಟ್ ಹಾಕಿಕೊಂಡು ಗಡ್ಡ ಬಿಟ್ಟಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದು, 90ರ ದಶಕದ ರಾಯಲ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚೇರ್ ಮೇಲೆ ಕುಳಿತು ಕೈಯಲ್ಲಿ ಕೋಲಿನ ಸ್ಟಿಕ್ ಹಿಡಿದುಕೊಂಡಿದ್ದಾರೆ. ಯಶ್ ಅವರ ನ್ಯೂ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದ್ಹಾಗೆ ಈ ಹೊಸ ಫೋಟೋ ಜಾಹಿರಾತು ಒಂದರ ದೃಶ್ಯವಂತೆ. ಈ ಫೋಟೋ ಯಶ್ ಅವರ ಹೊಸ ಚಿತ್ರದ್ದು ಆಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದ್ರೆ ಈ ಹೊಸ ಲುಕ್ ಜಾಹಿರಾತಿನ ಫೋಟೋ ಶೂಟ್ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ನಟ ಯಶ್ ಇದೇ ಜೂನ್ 6 ರಂದು ‘ಕೆಜಿಎಫ್-2’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಮೈಸೂರಿನಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಜಿಎಫ್’ ಚಿತ್ರದಲ್ಲೂ ಯಶ್ ಉದ್ದ ಕೂದಲು ಮತ್ತು ದಾಡಿ ಬಿಟ್ಟಿದ್ದರು. ಪಾರ್ಟ-2 ನಲ್ಲೂ ಅದೇ ಲುಕ್ ನಲ್ಲಿ ಮಿಂಚಲಿದ್ದಾರೆ. ಗರುಡನನ್ನು ರಾಖಿ ಭಾಯ್ ಮುಗಿಸಿದ ನಂತರ ಏನೆಲ್ಲಾ ಘಟನೆಗಳು ಕೆಜಿಎಫ್ ನಲ್ಲಿ ನಡೆಯಲಿವೆ ಎಂಬ ಕುತೂಹಲ ಇದ್ದೇ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top