fbpx
ಸಮಾಚಾರ

ನಿಖಿಲ್ ರಾಜಕೀಯ ಪ್ರಬುದ್ಧತೆಗೆ ಎಸ್‍ಎಂ ಕೃಷ್ಣ ಪ್ರಶಂಸೆ.

ಲೋಕಸಭಾ ಚುನಾವಣೆಯ ಸೋಲಿನ ನಂತರ ಜಯಶೀಲ ಅಭ್ಯರ್ಥಿ ಸುಮಲತಾ ಮತ್ತು ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ಮೊದಲ ಸಿನಿಮಾಗೆ ಶುಭಕೋರಿದ್ದ ನಿಖಿಲ್‍ರ ನಡೆಗೆ ಮಾಜಿ ಸಿಎಂ ಎಂಎಸ್ ಕೃಷ್ಣ ಮೆಚ್ಚುಗೆ ಸೂಚಿಸಿದ್ದಾರೆ.

ನಿಖಿಲ್ ನಡೆಯ ಕುರಿತು ಟ್ವೀಟ್ ಮಾಡಿರುವ ಎಂಎಸ್‍ಕೆ, “ಅಭಿಷೇಕ್ ಅವರ ಹೊಸ ಸಿನಿಮಾಗೆ ಶುಭ ಕೋರಿದ್ದ ನಿಮ್ಮ ಪೋಸ್ಟ್ ಅನ್ನು ನಾನು ನೋಡಿದ್ದೇನೆ. ನಿಮ್ಮ ನಡೆಯಿಂದ ಪ್ರಭಾವಿತನಾಗಿದ್ದು, ಇದನ್ನೇ ರಾಜಕೀಯ ಪ್ರಬುದ್ಧತೆ ಎಂದು ಕರೆಯುತ್ತೇವೆ. ರಾಜಕೀಯ ಬದುಕಿನಲ್ಲಿ ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ರಾಜಕಾರಣಕ್ಕಿಂತಲೂ ಬದುಕು ದೊಡ್ಡದು. ಇದೇ ರೀತಿ ಮುಂದುವರಿದರೆ, ನಿಮಗೆ ಜಯ ಖಂಡಿತ ಲಭಿಸುತ್ತದೆ” ಎಂದು ಶುಭ ಹಾರೈಸಿದ್ದಾರೆ.

 

 

ಮೊದಲು ಶುಭಕೋರಿದ್ದರು ನಿಖಿಲ್:
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಿಖಿಲ್ ಕುಮಾರಸ್ವಾಮಿ ಇಷ್ಟು ದಿನ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಬುಧವಾರ ದಿವಂಗತ ಅಂಬರೀಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಅವರು, ನಂತರ ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದರು. ಅಂಬರೀಶ್ ಹುಟ್ಟುಹಬ್ಬ ಹಾಗೂ ಅಭಿಷೇಕ್ ಅವರ ‘ಅಮರ್’ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಶುಭ ಹಾರೈಸಿದ್ದರು.. ನಂತರ ನಿಖಿಲ್ ಹಾರೈಕೆಗೆ ಅಭಿಷೇಕ್ ಇನ್ಸ್ಟಾಗ್ರಾಮ್ ನಲ್ಲಿಯೇ ಧನ್ಯವಾದ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top