fbpx
ಸಮಾಚಾರ

ವಿಶ್ವಕಪ್ 2019ರಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ ಸಚಿನ್ ತೆಂಡೂಲ್ಕರ್.

ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದೇ ಪರಿಗಣಿಸಲ್ಪಡುವ ಸಚಿನ್‌ ತೆಂಡೂಲ್ಕರ್‌ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 12ನೇ ಏಕದಿನ ವಿಶ್ವಕಪ್‌ನಲ್ಲಿ ತಜ್ಞ ವೀಕ್ಷಕ ವಿವರಣೆಗಾರನಾಗಿ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯಾವಳಿಯ ಮೊದಲ ಪಂದ್ಯದ ವೀಕ್ಷಕ ವಿವರಣೆಯನ್ನು ನೀಡುವ ಮೂಲಕ ಸಚಿನ್ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳನ್ನು ಬೆರಗುಗೊಳಿಸಿದ್ದಾರೆ.

ಆತಿಥೇಯ ಇಂಗ್ಲೆಂಡ್‌ ಹಾಗೂ ದ.ಆಫ್ರಿಕಾ ತಂಡಗಳ ನಡುವಣ ಉದ್ಘಾಟನಾ ಪಂದ್ಯಕ್ಕೂ ಮೊದಲೇ ಮಾಸ್ಟರ್‌ ಬ್ಲಾಸ್ಟರ್‌ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕಾಮೆಂಟರಿ ಮಾಡಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ್ದಾರೆ. ಸಚಿನ್ ಓಪನ್ಸ್ ಎಗೈನ್, ಈ ಬಾರಿ ಕಾಮೆಂಟರಿ ಬಾಕ್ಸ್‌ನಲ್ಲಿ. ಮಧ್ಯಾಹ್ನ 1.30ರ ನಂತರ ಸ್ಟಾರ್ ಸ್ಪೋರ್ಟ್ಸ್ ನೋಡಿ ಎಂದು ಸ್ಟಾರ್ ಸ್ಫೋರ್ಟ್ಸ್ ಟ್ವೀಟ್ ಮಾಡಿತ್ತು.

ಅಂದ ಹಾಗೆ ಭಾರತದ ಪಂದ್ಯಗಳಿಗೂ ಸಚಿನ್ ಕಾಮೆಂಟರಿ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ. ಭಾರತ ತನ್ನ ಮೊದಲ ಮುಖಾಮುಖಿಯಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top