fbpx
ಸಮಾಚಾರ

“ವಿರಾಟ್ ಕೊಹ್ಲಿ ಅಪ್ರಬುದ್ಧ” ಟೀಂ ಇಂಡಿಯಾ ನಾಯಕನನ್ನು ಕೆಣಕಿದ ರಬಾಡ.

ವಿಶ್ವಕಪ್ ಟೂರ್ನಿ ಪ್ರಾರಂಭವಾಗಿದ್ದು, ಭಾರತ ಇದುವರೆಗೆ ಯಾವುದೇ ಒಂದು ಪಂದ್ಯವನ್ನು ಆಡಿಲ್ಲ ಆಗಲೇ ಆಟಗಾರರ ನಡುವೆ ಮಾತಿನ ಯುದ್ದ ಪ್ರಾರಂಭವಾಗಿದೆ. “ಟೀಂ ಇಂಡಿಯಾದ ನಾಯಕ ಅಪ್ರಬುದ್ಧ. ತಮ್ಮ ವಿರುದ್ಧದ ನಿಂದನೆಗಳು ಎದುರಿಸಲಾಗದೆ ಮೈದಾನದಲ್ಲಿ ಅಗ್ರೇಷನ್ ಆಗಿ ವರ್ತಿಸುತ್ತಾರೆ” ಎಂದು ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡಾ ಹೇಳಿದ್ದು ಇದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಐಪಿಎಲ್ ವೇಳೆ ನಡೆದ ಪ್ರಸಂಗವೊಂದನ್ನು ಉಲ್ಲೇಖಿಸಿ ‘ಕೊಹ್ಲಿ ಅಪ್ರಬುದ್ಧ’ ಎಂದಿದ್ದಾರೆ. ಖಾಸಗಿ ಕ್ರಿಕೆಟ್ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಬಾಡ ”ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಬಳಿಕ ಕೊಹ್ಲಿ ಅಸಮರ್ಪಕ ಪದವೊಂದನ್ನು ಬಳಸಿದರು. ನಾನು ಪ್ರತ್ಯುತ್ತರ ನೀಡಿದೆ. ತಕ್ಷಣವೇ ಅವರು ಸಿಟ್ಟಿಗೆದ್ದರು. ಇದರೊಂದಿಗೆ ತಮ್ಮ ಅಪ್ರಬುದ್ಧತೆಯನ್ನು ಜಗಜ್ಜಾಹೀರುಗೊಳಿಸಿದರು. ಅವರೊಬ್ಬ ಅದ್ಭುತ ಆಟಗಾರರಾಗಿದ್ದರೂ, ಟೀಕೆಯನ್ನು ಸಹಿಸಿಕೊಳ್ಳುವ ವ್ಯವಧಾನ ಅವರಿಗಿಲ್ಲ. ಪಂದ್ಯದುದ್ದಕ್ಕೂ ಅವರು ಅಪ್ರಬುದ್ಧ ವ್ಯಕ್ತಿಯಂತೆ ಕಂಡರು,” ಎಂದು ಟೀಕಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಜೂನ್ 5ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದ್ದು ಅದಾಗಲೇ ಆಫ್ರಿಕಾದ ವೇಗಿ ಕಗಿಸೋ ರಬಾಡಾ ಸ್ಲೆಡ್ಜಿಂಗ್ ಗೆ ಮುಂದಾಗಿದ್ದಾರೆ. ಕೊಹ್ಲಿ ಕುರಿತ ರಬಾಡಾ ಹೇಳಿಕೆ ಹಿನ್ನಲೆಯಲ್ಲಿ ಜೂನ್ 5 ರಂದು ನಡೆಯುವ ಪಂದ್ಯ ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top