fbpx
ಸಮಾಚಾರ

“ಗಾಂಧೀಜಿ ಪ್ರತಿಮೆ, ಫೋಟೋಗಳನ್ನು ತೆಗೆಯಿರಿ” ಗೋಡ್ಸೆಯನ್ನು ಹೊಗಳಿ ಗಾಂಧೀಜಿ ಅವಹೇಳನ ಮಾಡಿದ IAS ಅಧಿಕಾರಿ.

ಮಹಾತ್ಮಾ ಗಾಂಧಿ ಅವರನ್ನು ವಿರೋಧಿಸಿ, ನಾಥೂರಾಮ್ ಗೋಡ್ಸೆ ಅವರನ್ನು ಹೊಗಳಿದ ಮುಂಬೈನ ಮಹಿಳಾ ಐಎಎಸ್​ ಅಧಿಕಾರಿಯೊಬ್ಬರು ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೃಹತ್​ ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​ನಲ್ಲಿ ಡೆಪ್ಯುಟಿ ಮುನ್ಸಿಪಲ್​ ಕಮಿಷನರ್​ ಆಗಿ ಕಾರ್ಯನಿರ್ವಹಿಸುತ್ತಿರುವ ನಿಧಿ ಚೌಧರಿ ಅವರು ಮೇ 17ರಂದು ಗಾಂಧೀಜಿ ಕುರಿತು ಟ್ವೀಟ್​ ಮಾಡಿದ್ದರು. ಅದರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

 

 

ಮಹಾತ್ಮಾ ಗಾಂಧಿಯವರ ಮೃತದೇಹದ ಫೋಟೋ ಹಾಕಿ ಮೇ 17ರಂದು ಮಾಡಿದ್ದ ಟ್ವೀಟ್ ನಲ್ಲಿ ನಿಧಿ ಚೌಧರಿ, 150ನೇ ಜಯಂತಿಯನ್ನು ಅದ್ವಿತೀಯವಾಗಿ ಆಚರಿಸುವುದರಲ್ಲಿ ಏನಿದೆ, ಏನಾಗುತ್ತಿದೆ ನಮ್ಮ ದೇಶದಲ್ಲಿ, ವಿಶ್ವದಾದ್ಯಂತ ಇರುವ ಮಹಾತ್ಮಾ ಗಾಂಧಿ ಪ್ರತಿಮೆಗಳನ್ನು ತೆಗೆದುಹಾಕಬೇಕು ಮತ್ತು ನೋಟುಗಳಿಂದ ಅವರ ಭಾವಚಿತ್ರವನ್ನು ತೆಗೆಯಬೇಕು. ಗಾಂಧಿ ಹೆಸರಿನಲ್ಲಿರುವ ದೇಶದ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದ ನಿಧಿ, ಮಹಾತ್ಮಾ ಗಾಂಧಿಯನ್ನು ನಾಥೂರಾಮ್ ಗೋಡ್ಸೆ ಕೊಂದಿದ್ದು ಒಳ್ಳೆಯದೇ ಆಯಿತು. 1948ರ ಜನವರಿ 30ಕ್ಕೆ ಗೋಡ್ಸೆಯವರಿಗೆ ಧನ್ಯವಾದಗಳು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.

 

 

ಟ್ವೀಟ್​ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್​ ಡಿಲೀಟ್​ ಮಾಡಿ, ಸ್ಪಷ್ಟನೆ ನೀಡಿರುವ ಅಧಿಕಾರಿ, ಗಾಂಧಿ ಕುರಿತು 17/05/2019ರಂದು ಮಾಡಿದ್ದ ಟ್ವೀಟ್​ ಅನ್ನು ಜನರು ಅಪಾರ್ಥ ಮಾಡಿಕೊಂಡಿದ್ದರಿಂದ ಅದನ್ನು ಡಿಲೀಟ್​ ಮಾಡಿದ್ದೇನೆ. ನಾನು ಕನಸಲ್ಲೂ ಕೂಡ ಗಾಂಧಿಗೆ ಅಪಮಾನ ಎಸಗುವುದಿಲ್ಲ. ನಾನು ಅವರಿಗೆ ಕೊನೆಯವರೆಗೂ ಗೌರವ ನೀಡುತ್ತೇನೆ. ನನ್ನ ಟ್ವೀಟ್ ನ್ನು ತಪ್ಪಾಗಿ ಅರ್ಥೈಸಿದವರು ನನ್ನ ಟೈಮ್ ಲೈನ್ ನೋಡಬೇಕು. ಕಟುವಾಗಿ ಟೀಕಿಸಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿರುವುದಕ್ಕೆ ನನಗೆ ತೀವ್ರ ದುಃಖವಾಗುತ್ತಿದೆ ಎಂದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top