fbpx
ಸಮಾಚಾರ

ಪ್ರವೇಶ ಅರ್ಜಿಯಲ್ಲಿ ‘ಮಾನವೀಯತೆ’ ಯನ್ನು ಧರ್ಮವಾಗಿ ಪರಿಗಣಿಸಿದ ಕಾಲೇಜು.

ಜನರ ನಡುವೆ ಸರ್ವ ಧರ್ಮ ಸಹಿಷ್ಣುತೆಯನ್ನು ಸಾರಬೇಕಾದವರೇ ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮ ಪ್ರಚಾರದ ಹೆಸರಲ್ಲಿ ಧರ್ಮದ ಅಫೀಮನ್ನು ಯುವಜನರ ತಲೆಗೆ ತುಂಬಿ ಸಮಾಜದ ಸ್ವಾಸ್ಥ್ಯವನ್ನ ಹಾಳುಮಾಡುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತಗುತ್ತಲೇ ಇವೆ. ಏತನ್ಮಧ್ಯೆ ಇಲ್ಲೊಂದು ಕಾಲೇಜು ತನ್ನ ಪ್ರವೇಶಾತಿ ಅರ್ಜಿಯ ನಮೂನೆಯಲ್ಲಿ ಮಾನವೀಯತೆಯನ್ನು ಧರ್ಮವಾಗಿ ಪರಿಗಣಿಸಿದೆ,. ಈ ಮೂಲಕ ಮಾನವೀಯತೆಗಿಂತ ಶ್ರೇಷ್ಠವಾದ ಧರ್ಮ ಮತ್ಯಾವುದೂ ಇಲ್ಲ ಎಂದು ಸಾರಲು ಹೊರಟಿದೆ.

ಕೋಲ್ಕತಾದ ಬೆಥೂನ್ ಕಾಲೇಜು ಪ್ರವೇಶಾತಿ ಪತ್ರದ ‘ಧರ್ಮ’ ವಿಭಾಗದಲ್ಲಿ ‘ಹುಮಾನಿಟಿ(ಮಾನವೀಯತೆ)’ಯನ್ನು ಆಯ್ಕೆಯಾಗಿ ನೀಡಲಾಗಿದೆ. ಮೇ 27 ರಿಂದ ಪ್ರಾರಂಭವಾದ ಪ್ರವೇಶ ಪ್ರಕ್ರಿಯೆಯಲ್ಲಿ ‘ಧರ್ಮ’ ವಿಭಾಗದಲ್ಲಿ ಮೊದಲ ಆಯ್ಕೆಯಾಗಿ ‘ಮಾನವೀಯತೆ’ಯನ್ನು ಇಟ್ಟುಕೊಳ್ಳುವ ಮೂಲಕ ಏಷ್ಯಾದ ಮೊದಲ ಮಹಿಳಾ ಕಾಲೇಜಾಗಿ ಹೊರಹೊಮ್ಮಿದೆ.

ಕೆಲವು ಯುವಕರು ತಮ್ಮ ಜಾತಿ, ಧರ್ಮವನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಅದೂ ಅಲ್ಲದೆ ಎಲ್ಲ ಧರ್ಮಗಳು ಕೂಡ ಮಾನವೀಯತೆಯೇ ಶ್ರೇಷ್ಠ ಎಂದು ಹೇಳಿರುವುದರಿಂದ ಧರ್ಮದ ವಿಭಾಗದಲ್ಲಿ ‘ಮಾನವೀಯತೆ’ ಎಂದೇ ಆಯ್ಕೆಯನ್ನು ನೀಡಿದ್ದೇವೆ. ಧರ್ಮಕ್ಕಿಂತಲೂ ಮಾನವೀಯತೆಯೇ ಮುಖ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಮಮತಾ ರಾಯ್‌ ಚೌಧರಿ ತಿಳಿಸಿದ್ದಾರೆ.

ಕಾಲೇಜಿನ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ಮತ್ತು ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top