fbpx
ಸಮಾಚಾರ

ಕರ್ನಾಟಕದ ಮೊದಲ ಮುಸ್ಲಿಂ ಮಹಿಳಾ ಐಎಎಸ್ ಅಧಿಕಾರಿಯ ಕನ್ನಡ ಪ್ರೇಮ ನೋಡಿ ಬೆರಗಾಗುತ್ತೀರಾ !

ಬೆಂಗಳೂರಿನಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹುಡುಗಿ ದೇಶವೇ ಹುಬ್ಬೇರಿಸುವಂತ ಸಾಧನೆ ಮಾಡಿದ ಕಥೆ ಇದು

ಬೆಂಗಳೂರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಇವರು ಇಂದು ದೇಶದ ಪ್ರತಿಷ್ಠಿತ ಐಎಎಸ್ ಆಫೀಸರ್ ಗಳಲ್ಲಿ ಒಬ್ಬರು ,
ನನ್ನ ಜೊತೆ ಹಿಂದಿ / ಇಂಗ್ಲಿಷ್ ನಲ್ಲಿ ಮಾತನಾಡಿ. ಈ ರೀತಿಯಾದ ಅಹಂಕಾರದಿಂದ ಮಾತನಾಡುವುದು ಬೆಂಗಳೂರಿನಲ್ಲಿ ಸರ್ವೇ-ಸಾಮಾನ್ಯವಾಗಿಬಿಟ್ಟಿದೆ. ಆದರೆ ಇವರು ಎಲ್ಲೋರೊಂದಿಗೆ ಆತ್ಮೀಯವಾಗಿ ಕನ್ನಡದಲ್ಲೇ ಮಾತಾಡುತ್ತಾರೆ , ಆಕೆ ತಾನು ಬಿಷಪ್ ಕಾಟನ್ ಶಾಲೆಯಲ್ಲಿ ಕಲಿಯುವಾಗ , ಜ್ಯೋತಿ ನಿವಾಸ್ ಕಾಲೇಜ್ ಗೆ ಹೋಗುವಾಗ ಹೇಗಿದ್ದಾರೋ ಹಾಗೆಯೇ ಇದ್ದಾರೆ ಎನ್ನುತ್ತಾರೆ ಬಲ್ಲವರು.

ಐಎಎಸ್ ಅಧಿಕಾರಿ ಎಂಬ ಯಾವುದೇ ದರ್ಪ , ಬಿಗುಮಾನಗಳಿಲ್ಲದೆ ತೀರಾ ಪಕ್ಕದ ಮನೆಯ ಬಹುದಿನದ ಪರಿಚಯದ ಹುಡುಗಿ ಎಂಬಷ್ಟು
ಆತ್ಮೀಯವಾಗಿ ಮಾತಾಡಿಸುತ್ತಾರೆ ಎನ್ನುತ್ತಾರೆ ಅವರ ಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಹೀಗೆ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಇವರೇ ಐಎಎಸ್ ಅಧಿಕಾರಿ ಶ್ರೀಮತಿ ಸಲ್ಮಾ ಫಹೀಮ್ ರವರು, ಹೆಚ್ಚು ಮಾತಿಗೆ ಅವಕಾಶ ಕೊಡದೆ ಕೆಲಸ ಮಾಡಿ ತೋರಿಸುವ ದಿಟ್ಟ ಹೆಣ್ಣು ಮಗಳು ಸಲ್ಮಾರವರು
ಇಷ್ಟೆಲ್ಲ ಸರಳ ವ್ಯಕ್ತಿತ್ವದವರು ಬೇರೆ ಯಾರು ಅಲ್ಲ ಇವರೇ ಶ್ರೀಮತಿ ಸಲ್ಮಾ ಫಹೀಮ್
ಐಎಎಸ್ ಪಾಸು ಮಾಡಲು ಅನೇಕ ತೊಳಲಾಟಗಳಿರುತ್ತವೆ , ಸಲ್ಮಾ ರವರ ಈ ಎಲ್ಲ ಅಡೆ ತಡೆಗಳನ್ನು ಮೀರಿ ಅವರ ಪಾಲಿಗೆ ಹೀರೋ ಆದವರು ಅವರ ತಂದೆ ಶ್ರೀಯುತ ಫಹೀಮ್ ರವರು , ಎಷ್ಟೇ ಅಡ್ಡಿಗಳಿದ್ದರು ತಮಗೆ ಬರುತಿದ್ದ ಸಂಬಳದಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಇಂದು ದೇಶವೇ ಅವರ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಾರೆ .

ನಿಮಗೆ ಇನ್ನೊಂದು ವಿಷಯ ಗೊತ್ತಿರಲೇ ಬೇಕು ಸಲ್ಮಾ ರವರು ಕರ್ನಾಟಕದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಅಷ್ಟೇ ಅಲ್ಲದೆ ‘ಕರ್ನಾಟಕ ರಾಜ್ಯದ ಮೊದಲ ಮುಸ್ಲಿಂ ಮಹಿಳಾ ಐಎಎಸ್ ಅಧಿಕಾರಿ’ ಎಂಬ ಹೆಗ್ಗಳಿಕೆಯೂ ಸಹ ಇವರದ್ದು , ತಮ್ಮ 26 ವಯಸ್ಸಿನಲ್ಲಿ ಅಂದರೆ 29-8-2006 ರಲ್ಲಿ ಐಎಎಸ್ ಪೂರ್ಣಗೊಳಿಸಿದ ಕೀರ್ತಿ ಇವರದ್ದು.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರವರಿಂದ ‘ಕರ್ನಾಟಕ ರಾಜ್ಯದ ಮೊದಲ ಮುಸ್ಲಿಂ ಮಹಿಳಾ ಐಎಎಸ್ ಅಧಿಕಾರಿ’ ಸಲ್ಮಾ ರವರಿಗೆ ಪ್ರಶಸ್ತಿ ಫಲಕ ವಿತರಿಸಿದ ಕ್ಷಣ.

2006 ರಲ್ಲಿ ರಾಜ್ಯಕ್ಕೆ ಕೊಡುಗೆ ನೀಡಲು ಪ್ರಾರಂಭಿಸಿದವರು ರಾಜ್ಯದ ಅನೇಕ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು
ಜಿಲ್ಲಾ ಪಂಚಾಯತ್ ಮಾಜಿ ಸಿಇಒ, ಗುಲ್ಬರ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ನ ಸಿಇಒ ಆಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿ
ನಂತರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಮಾಜಿ ಯೋಜನಾ ನಿರ್ದೇಶಕರು(KSAPS) ,ಕರ್ನಾಟಕ ಸರಕಾರದ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕೆಎಸ್ಆರ್ಟಿಸಿ (KSRTC) ಸಿಬ್ಬಂದಿ ಹಾಗು ಪರಿಸರ ವಿಭಾಗದಲ್ಲಿ ನಿರ್ದೇಶಕರಾಗಿ ದುಡಿದು
ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಹತ್ವಾಕಾಂಕ್ಷೆಯ ಕರ್ನಾಟಕದಲ್ಲಿ ಶುರುವಾಗುವ ನವೋದ್ಯೋಗಗಳು  “ಸ್ಟಾರ್ಟ್ ಅಪ್ ” ಬೆಂಗಳೂರು ಅಲ್ಲದೆ ಮೈಸೂರು ,ಹುಬ್ಬಳ್ಳಿ ,ಶಿವಮೊಗ್ಗ ,ಮಂಗಳೂರು ಈ ರೀತಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹಬ್ಬಬೇಕೆಂಬುದು ಇವರ ಮಹದಾಸೆ ಇಲ್ಲಿನ ಕನ್ನಡಿಗರು ಸಹ ಅವಕಾಶ ವಂಚಿತರಾಗಬಾರದು ಎಂಬ ಉದ್ದೇಶ ಹೊಂದಿ  ಅದರಂತೆಯೇ ಅದಕ್ಕಾಗಿ ದುಡಿಯುತ್ತಿದ್ದಾರೆ.
ಹೀಗೆ ರಾಜ್ಯದ ವಿವಿಧ ವಿಭಾಗಗಳಲ್ಲಿ ತಮ್ಮ ಕಾರ್ಯವೈಖರಿ ಮೆರೆದಿದ್ದಾರೆ.

ಎಷ್ಟೋ ಹೆಣ್ಣು ಮಕ್ಕಳಿಗೆ ರೋಲ್ ಮಾಡೆಲ್ ಕೂಡ ಇವರು , ನಗರ ಪ್ರದೇಶದವರಿಗೆ ಸೌಲಭ್ಯಗಳು ಹೆಚ್ಚಿದ್ದು ಗ್ರಾಮೀಣ ಪ್ರದೇಶದ ಜನರು ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶ ಹೊಂದಿದ್ದಾರೆ ,
ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶ , ಉತ್ತಮ ವಿದ್ಯಾಭ್ಯಾಸ ದೊರಕಬೇಕೆಂಬುದು ಇವರ ಮೂಲ ಮಂತ್ರ .
ಈ ನಿಟ್ಟಿನಲ್ಲಿ ತಮ್ಮ ಕೆಲಸದಲ್ಲಿ ಬಿಡುವುಮಾಡಿಕೊಂಡು ಅನೇಕ ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದ ಕನ್ನಡದ ಐಎಎಸ್ ಅಧಿಕಾರಿಣಿಯವರಿಂದ ಮತ್ತಷ್ಟು ಒಳ್ಳೆಯ ಕೆಲಸಗಳು ಆಗಲಿ ,ದೇವರು ಆಯಸ್ಸು ,ಆರೋಗ್ಯಕೊಟ್ಟು ಕಾಪಾಡಲಿ ಎಂದು ನಮ್ಮ ತಂಡ ಹಾರೈಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top