fbpx
ಸಮಾಚಾರ

ಹನುಮಾನ್ ಚಾಲೀಸವನ್ನು ಪ್ರತಿದಿನ ಪಠಿಸುವುದರಿಂದ ಆಗುವ ಈ 4 ಲಾಭಗಳು

ಹನುಮಾನ್ ಚಾಲೀಸವನ್ನು ರಚಿಸಿದ್ದು ಅನೇಕ  ಕವಿತೆಗಳನ್ನು, ಕಾವ್ಯಗಳನ್ನು  ರಚಿಸಿರುವವರು ಹೆಸರುವಾಸಿಯಾಗಿರುವ  ಗೋಸ್ವಾಮಿ ತುಳಸೀದಾಸರು. ಹನುಮಾನ್ ಚಾಲೀಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನ ಮತ್ತು ಪ್ರಾಮುಖ್ಯತೆಯನ್ನು ಕೊಡಲಾಗಿದೆ.ಹನುಮಾನ್ ಚಾಲೀಸವನ್ನು ಓದಿದರೆ ಕೋತಿಯ ರೂಪದಲ್ಲಿರುವ ಹನುಮಂತ ದೇವರನ್ನು  ಪ್ರಸನ್ನಗೊಳಿಸಲು  ಮತ್ತು ಆಶೀರ್ವಾದವನ್ನು ಪಡೆಯಬಹುದು.ಹನುಮಾನ್ ಚಾಲೀಸವನ್ನು ಓಡುವುದರ ಮೂಲಕ ಸಾಡೇ ಸಾತಿಯಂತಹ ದೋಷಗಳನ್ನು ಕಡಿಮೆಗೊಳಿಸಬಹುದು.

ಮಂಗಳವಾರ ದಿನವನ್ನು ಹನುಮನಿಗೆಂದೇ ಮೀಸಲಿಡಲಾಗಿದೆ. ಮಂಗಳವಾರದ ದಿನ ಹನುಮಂತ ದೇವರನ್ನು ಪೂಜಿಸಲು ಉತ್ತಮ ದಿನವೆಂದು ಪರಿಗಣಿಸಲಾಗಿದೆ.ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ಹನುಮಂತನನ್ನು ಪ್ರಸನ್ನಗೊಳಿಸಲು ಒಳ್ಳೆಯ ದಿನವಾಗಿದೆ.ಹನುಮಾನ್ ಚಾಲೀಸದ ಪ್ರತಿಯೊಂದು ಸಾಲಿನಲ್ಲಿಯೂ ಕೂಡ ಅದರದ್ದೇ ಆದ ವಿಶೇಷವಾದ ಶಕ್ತಿ ಮತ್ತು ಪ್ರಾಮುಖ್ಯತೆ ಇದೆ.ಹನುಮಾನ್ ಚಾಲೀಸವನ್ನು ಪ್ರತ್ಯೇಕವಾಗಿ ರಾತ್ರಿಯ ಸಮಯದಲ್ಲಿ ಓದಿದರೆ ಅತ್ಯದ್ಬುತವಾದ ಪರಿಣಾಮಗಳು ಆ ವ್ಯಕ್ತಿಯ ಮೇಲೆ ಬೀರುವುದು ಆದರೂ ಸಹ ಅದೆಷ್ಟೋ ಜನರು ಬೆಳಗ್ಗೆಯೇ ಸ್ನಾನ ಮಾಡಿಕೊಂಡು ಮಂಗಳವಾರ ಮತ್ತು ಶನಿವಾರದ ದಿನ ಹನುಮಾನ್ ಚಾಲೀಸವನ್ನು ಓದುವರು.

 

 

ಹನುಮಾನ್ ಚಾಲೀಸ ಅತ್ಯಂತ ಶಕ್ತಿಯುತವಾದದ್ದು ಮತ್ತು ಇದನ್ನು ಓದಿದರೆ ಅದು ಸಾಡೇ ಸಾತಿಯಂತಹ ಶನಿ ಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡುವುದು ಹಾಗೆ ಉತ್ತಮ ಆರೋಗ್ಯವೂ ಸಹ ದೊರೆಯುವುದಲ್ಲದೇ ,ಸಿರಿ ,ಸಂಪತ್ತನ್ನು ತಂದು ಕೊಡುವುದು.
ಅದಕ್ಕಿಂತ ಹೆಚ್ಚಾಗಿ ಹನುಮಾನ್ ಚಾಲೀಸ ಓದುವುದು ಪ್ರೇತಾತ್ಮದಂತಹ ಕೆಟ್ಟ ಶಕ್ತಿಗಳನ್ನು ನಾಶ ಮಾಡುವುದು.ಹನುಮಾನ್ ಚಾಲೀಸವನ್ನು ಓದುವುದಕ್ಕೆ ಒಳ್ಳೆಯ ಸಮಯ ಬೆಳಗ್ಗೆ ಮತ್ತು ಸಂಜೆ , ಯಾರ ಜಾತಕದಲ್ಲಿ ಶನಿಯು ನೀಚನಾಗಿರುತ್ತಾನೋ ಮತ್ತು ಶನಿ ಗ್ರಹದ ಕೆಟ್ಟ ಪರಿಣಾಮಗಳನ್ನು ಎದುರಿಸುತ್ತಿರುವರೋ ಅಂತವರು ಶನಿವಾರ ರಾತ್ರಿ 8 ಬಾರಿ ಹನುಮಾನ ಚಾಲೀಸವನ್ನು ಜಪಿಸಿದರೆ ಉತ್ತಮ ಫಲಿತಾಂಶಗಳು ದೊರೆಯುವುವು. ಹನುಮಾನ್ ಚಾಲೀಸವನ್ನು ಓದಿದರೆ ಯಾವ ಯಾವ ಲಾಭಗಳು ಆಗುವವು ಎಂದು ತಿಳಿಯೋಣ ಬನ್ನಿ.

ಪ್ರೇತಾತ್ಮಗಳನ್ನು ಹೋಗಲಾಡಿಸಲು:ಪ್ರೇತಾತ್ಮಗಳನ್ನು ಹೋಗಲಾಡಿಸಲು ಹನುಮಾನ್ ಚಾಲೀಸವನ್ನು ಓದಬೇಕು.ಕೆಟ್ಟ  ಆತ್ಮಗಳು ಮತ್ತು ಪ್ರೇತಾತ್ಮದಂತಹ ನಕಾರಾತ್ಮಕ ಶಕ್ತಿಗಳು ನಮಗೆ ಹಾನಿಯುಂಟು ಮಾಡುತ್ತವೆ ಆದ್ದರಿಂದ  ಅಂತಹ ಕೆಟ್ಟ ಶಕ್ತಿಗಳು ನಮ್ಮ ಬಳಿ ಸುಳಿಯಂದಂತೆ ಮಾಡಲು  ಹನುಮಾನ್ ಚಾಲೀಸವು ನಮ್ಮನ್ನು ರಕ್ಷಿಸುತ್ತದೆ.ಮಕ್ಕಳು ಪ್ರತಿದಿನ ಹನುಮಾನ್ ಚಾಲೀಸವನ್ನು  ಓದಿದರೆ ಆವರ  ಮನಸ್ಸಿನಲ್ಲಿರುವ  ಭಯದ ಭಾವನೆಯು ದೂರ ಆಗುವುದು.

ಸಾಡೇ ಸಾತಿಯ ದುಷ್ಪರಿಣಾಮಗಳನ್ನು ಕಡಿಮೆ ಗೊಳಿಸುವುದು:ಹನುಮಂತ ದೇವರನ್ನು ಪೂಜಿಸುವುದು ಒಂದು ಉತ್ತಮ ಮಾರ್ಗವಾಗಿದೆ.  ಹನುಮಂತಸ್ವಾಮಿಯನ್ನು ಪೂಜಿಸುವುದರಿಂದ  ಶನೈಶ್ಚರನು ಪ್ರಸನ್ನಗೊಳ್ಳುವನು ಆದ್ದರಿಂದ ಶನೈಶ್ಚರನ ಸಾಡೇ ಸಾತಿಯ ದುಷ್ಪರಿಣಾಮಗಳು ಕಡಿಮೆಯಾಗುವವು.ಹಿಂದೂ ಗ್ರಂಥಗಳಲ್ಲಿರುವ ಕಥೆಗಳ ಪ್ರಕಾರ ಹನುಮಂತನು ಶನೈಶ್ಚರ ದೇವರ ಪ್ರಾಣವನ್ನು ಕಾಪಾಡಿದ ಕಾರಣ ಯಾರು ಹನುಮಂತನನ್ನು ಪೂಜಿಸುವರೋ  ಅವರ ಮೇಲೆ  ಶನಿಯ ಕೆಟ್ಟ ದೃಷ್ಟಿಯನ್ನು ಬೀರುವುದಿಲ್ಲ.ಶನೈಶ್ಚರನು ಹನುಮಂತನ ನಿಜವಾದ  ಭಕ್ತರಿಗೆ ಹಾನಿಯುಂಟು ಮಾಡುವುದಿಲ್ಲ.

ಪಾಪ ಕರ್ಮಗಳನ್ನು ಕ್ಷಮಿಸಿ ಬಿಡುವನು:ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಗೋತ್ತೋ ಗೊತ್ತಿಲ್ಲದೆಯೂ ಅನೇಕ ಪಾಪ ಕರ್ಮಗಳನ್ನು ಮಾಡಿದ್ದೇವೆ ಮತ್ತು ಮಾಡಿರುತ್ತೇವೆ ಸಹ ಅಂತಹ  ಪಾಪ ಕರ್ಮಗಳನ್ನು ಆಂಜನೇಯ ಸ್ವಾಮಿಯು  ಕ್ಷಮಿಸುತ್ತಾರೆ.ಹನುಮಾನ ಚಾಲೀಸವನ್ನು ಓದುವುದರಿಂದ ನಮ್ಮನ್ನು ಕ್ಷಮಿಸುತ್ತಾರೆ.ಹನುಮಾನ್ ಚಾಲೀಸವನ್ನು ಪ್ರತಿದಿನ ರಾತ್ರಿ 8 ಬಾರಿ ಓದಿದರೆ ನಾವು ಮಾಡಿದ ಪಾಪ ಕರ್ಮಗಳಿಂದ ಮುಕ್ತಿ ಪಡೆಯಬಹುದು.

ನಮ್ಮ ಜೀವನದಲ್ಲಿರುವ ಅಡೆ ತಡೆಗಳನ್ನು ನಿವಾರಿಸುವುದು:ಯಾರು ಹನುಮಾನ್ ಚಾಲೀಸವನ್ನು ಪ್ರತಿದಿನ ರಾತ್ರಿ  ಓದುವರೋ.ಯಾರೇ ಆಗಲಿ ಅವರ ಜೀವನದಲ್ಲಿ ನಾವು ಎದುರಿಸುತ್ತಿರುವ ಅನೇಕ ರೀತಿಯ ಎಲ್ಲಾ ಅಡೆ ತಡೆಗಳನ್ನು ಅವರ ದಾರಿಯಿಂದ ತಡೆದು ಹಾಕುವುದು.

ಇನ್ನೂ ಹನುಮಾನ ಚಾಲೀಸವನ್ನು ಶ್ರದ್ದೆ ,ಭಕ್ತಿಯಿಂದ, ಓದುವುದರಿಂದ  ಕೋತಿಯ ರೂಪದಲ್ಲಿರುವ ಹನುಮಂತ,ಮಾರುತಿ ಎಂದು ಕರೆಯುವ ಹನುಮಂತಸ್ವಾಮಿಯು ನಮ್ಮ ಎಲ್ಲಾ ಆಸೆಗಳನ್ನು ಪೂರೈಸಿ ನಾವು ಅಂದುಕೊಂಡಿರುವ ಕೆಲಸಗಳನ್ನು ನಮ್ಮ ಗುರಿಯನ್ನು ಸಾಧಿಸುವಲ್ಲಿ  ಹನುಮಾನ ದೇವನು ನೆರವಾಗುವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top